ಮರಳಿ ಆ ನೆನಪುಗಳು
ಮರುಕಳಿಸುತಿವೆ ಹನಿಯಾಗಿಸುತ
ಬೆರೆತು ದೂರಾಗುತಿವೆ
ಒಲವಾಗಿಸುವ ಕನಸೂ ಸಹಿತ
ಕಣ್ಣೀರು ಜಾರುವಾಗ
ಸಾಲಾಗಿ.. ಸಾಲಾಗಿ
ನೋವೆಲ್ಲ ಮೂಡಿ ಬಂತು
ಹಾಡಾಗಿ .. ಹಾಡಾಗಿ
ನನ್ನನ್ನು ಕೂಡಿ ಹಾಡು
ನೀನಾಗಿ..ನೀನಾಗಿ
ಕಣ್ಣೀರು ಜಾರುವಾಗ
ಸಾಲಾಗಿ.. ಸಾಲಾಗಿ
ಈ ಕಂಬನಿ ಒಬ್ಬಂಟಿಯಾಗುತಿದೆ
ನೀನಿರದೆ
ಓ ಓ..
ಒಂದಾಗಬೇಕಿದೆ ಕೂಡಿಟ್ಟುಕೊಂಡ ನನ್ನ ನಿನ್ನ ಸವಿ ಭಾವನೆ
ಮುಂದಾಗಲಾರೆಯಾ ನನ್ನಂತೆ ನೀನೂ ಕೈ ಚಾಚುತ ಸುಮ್ಮನೆ?
ಬೇಕಿಲ್ಲ ಕಾರಣ ಈ ಜೀವವಿನ್ನೂ ನಿನಗಾಗಿ ಒದ್ದಾಡಿದೆ
ಯಾಕಿಷ್ಟು ದಾರುಣ ನೀ ಬಿಟ್ಟು ಹೋದ ಗಾಯವಿನ್ನೂ ಹಸಿಯಾಗಿದೆ
ನಿಂತಂತೆ ಬಾಕಿ ಮಾತು
ಸಾಲಾಗಿ.. ಸಾಲಾಗಿ
ಈ ಮೌನ ಮೂಡಿಬಂತು
ಹಾಡಾಗಿ .. ಹಾಡಾಗಿ
ನನ್ನನ್ನು ಕೂಡಿ ಹಾಡು
ನೀನಾಗಿ..ನೀನಾಗಿ
ಕಣ್ಣೀರು ಜಾರುವಾಗ
ಸಾಲಾಗಿ.. ಸಾಲಾಗಿ
ಈ ಕಂಬನಿ ಒಬ್ಬಂಟಿಯಾಗುತಿದೆ
ನೀನಿರದೆ
ಓ ಓ..
No comments:
Post a Comment