Saturday, 18 September 2021

ನಿನ್ನೊಂದಿಗೆ ಈ ಯಾನವೇ ಚಂದ

ನಿನ್ನೊಂದಿಗೆ ಈ ಯಾನವೇ ಚಂದ

ನಿನ್ನಿಂದಲೇ‌ ನೆನಪೆಲ್ಲವೂ ಅಂದ
ಏನಾದರೂ ನಾ ಸೋಲುವುದಿಲ್ಲ 
ನೀ ನೀಡಿದ ಆ ಬೆಂಬಲದಿಂದ
ಎಲ್ಲೇ ಇರು ಹೇಗೇ ಇರು
ಅರಸುವೆ ಮನದಾಳದಿಂದ
ಗೆಳೆತನವೇ ಚಂದ
ಸ್ನೇಹಾನುಬಂಧ

ಆಟಾಡುವ ಬಾ ಕಣ್ಣಾ ಮುಚ್ಚಾಲೇ
ಹುಡುಕಾಡಿ ನಾ ಸೋಲಬೇಕು
ಗೀಚೋಣ ಬಾ ಬಿಳಿ ಗೋಡೆಯ ಮೇಲೆ
ಬಳಪಾನೇ‌ ಸಾಕೆನ್ನಬೇಕು
ಹಾಳೆಗಳ ದೋಣಿಯಲಿ
ಚಲಿಸುವ ಸಂತೋಷದಿಂದ
ಗೆಳೆತನವೇ ಚಂದ
ಸ್ನೇಹಾನುಬಂಧ

ತಗಾದೆ ಮಾಡಲು ತಮಾಷೆಯಲ್ಲಿ 
ಒಮ್ಮೊಮ್ಮೆ ನೋವಾಗುವಂತೆ
ವಿರಾಮವಿಲ್ಲದ ತಯಾರಿಯಲ್ಲಿ
ತೂಕಡಿಸಿ ಒದ್ದಾಡಿದಂತೆ
ಸಾಕಾದರೂ ಬೇಕೆನ್ನುವ
ಹರುಷವು ಈ ಸ್ನೇಹದಿಂದ
ಗೆಳೆತನವೇ ಚಂದ
ಸ್ನೇಹಾನುಬಂಧ

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...