Saturday, 18 September 2021

ಹೇ ಒಲವೇ ... ಈ ಜೀವವಿನ್ನೂ ನಿನ್ನದೇ

ಹೇ ಒಲವೇ

ಈ ಜೀವವಿನ್ನೂ ನಿನ್ನದೇ 
ನೀ ಇರದೆ
ಈ‌ ಲೋಕ ಶೂನ್ಯವಾಗಿದೆ
ಮಾತು ಮಾತಿಗೂ ಮರೆಯಾಗೋ
ಮಾಯಗಾತಿ ಆಗುವೆಯೇಕೆ
ಸಾಕು ಮಾಡು ಒದ್ದಾಟವನು
ಸಮೀಪವಾಗುತ
ಗಾಯಗೊಂಡಿರೋ ಹೃದಯಕ್ಕೆ
ಹಿತವಾದ ಲೇಪನ ನೀನಾದೆ
ಸೋತು ಹೋದರೂ ಈ ವೇಳೆ
ಸಹಾಯವಾದಹಾಗಿದೆ
ಬೇಲಿ ಹಾಕದೆ ಮನಸನ್ನು
ತೆರೆಯುತ್ತ ನಿನ್ನ ದಾರಿ ಕಾದೆ
ಕಣ್ಣಿನಲ್ಲಿಯೇ ಮನೆ ಮಾಡು
ವಿದಾಯ ಹೇಳದೆ

ಕಳುಹಿಸಿದ ಕನಸದು ತುಲುಪಿತಾ
ಕವಿತೆಗಳ ಸರಣಿಕೆ ಹಿಡಿಸಿತಾ
ಕಲಿಸುತಲಿ ಕಲಿಯೋ ಪ್ರೀತಿ ಎದೆಗೆ ನಾಟಿತಾ
ಎಣಿಸುತಿರು ಸರಿಯುವ ಕ್ಷಣವನು
ಸ್ಮರಿಸುತಲಿ ಪ್ರಣಯದ ಪದವನು
ಆಗುವುದು ನನಗಾದಂತೆ ನಿನಗೂ ಖಂಡಿತ
ಬಿಡಿಸುತಲಿ ಬಾಳ ಸಿಕ್ಕನು
ಹೆಣೆಯುತಲಿ ನೆನಪ ಕೌದಿಯ
ಕಳೆಯುವ ಉಳಿದ ಜೀವನ ಪ್ರೀತಿ ಮಾಡುತಾ...

ಎತ್ತ ನೋಡಲು ನೀನೇನೇ
ನಿನ್ನತ್ತ ವಾಲುವ ಮಗುವಾದೆ
ಬಿತ್ತಿ ಹೋದೆ ನೀ ತಳಿರನ್ನು
ಉಪಾಯವಿಲ್ಲದೆ
ಚಿತ್ತ ಮೂಡಿಸೋ ಚಿತ್ತಾರ
ನೂರಾರು ಬಣ್ಣ ಕೂಡುವ ಸಂತೆ
ಪ್ರೀತಿ ಮಾಡುವ ಮನಸಲ್ಲೇ
ಪ್ರಚಾರವಿಲ್ಲದೆ...

ಹೇ ಒಲವೇ
ಈ ಜೀವ ಭಾಗ ನಿನ್ನದೇ
ನೀ ಇರದೆ
ಈ‌ ಲೋಕ ಶೂನ್ಯವಾಗಿದೆ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...