Saturday, 18 September 2021

ಗೆರೆಯ ದಾಟಿ ಬಂದು

ಗೆರೆಯ ದಾಟಿ ಬಂದು 

ಮನಕೆ ಲಗ್ಗೆ ಇಟ್ಟ ಪೋರಿ
ಮದನಾರಿ
ಗಿಲಕಿ ಸದ್ದಿನಂತೆ  
ಎದೆಯ ಕಲಕಿ ಹೋದ ಚೋರಿ
ಸುಕುಮಾರಿ
ಹೇ ಕಡೆಗಣಿಸಬೇಡವೇ 
ಕನಿಕರವೇ ಇಲ್ಲವೇ 
ಕನಸಲ್ಲೂ ಎದುರಾಗಿ ಮರೆಯಾಗಬೇಡವೇ 
ಒಲವುಣಿಸು ಕೂಡಲೇ
ಮನ ತಣಿಸು ಕೋಗಿಲೆ 
ಇನಿದಾದ ದನಿಯಲ್ಲಿ ನೀ ಕೆಣಕು ಜೀವವೇ 
ಗೆರೆಯ ದಾಟಿ ಬಂದು... 

ಚಪ್ಪರವ ಸೀಳಿಕೊಂಡು   
ನುಸುಳಿ ಬಂದೆ ಬಿಸಿಲಿನಂತೆ 
ಸಕ್ಕರೆಯ ಪಾಕದಲ್ಲಿ 
ಸಿಕ್ಕಿ ಹಾಕಿಕೊಂಡೆ ದುಂಬಿಯಂತೆ 
ಹಪ್ಪಳವು ಮುರಿಯುವಂತೆ 
ಚಲ್ಲಾಪಿಲ್ಲಿ ಆಗಿ ಹೋದೆ ನೋಡು   
ಹತ್ತಿರಕೆ ಬಂದು ಮೆಲ್ಲ  
ಮುದ್ದು ಮಾಡಿ ಹೋಗು ಮಗುವಿನಂತೆ 

ಎಲ್ಲಿ ಎಲ್ಲಿ ನಿನ್ನ ಗಮನವು 
ಉತ್ತರಿಸು ಬಿಟ್ಟು ಬಿಂಕವನು
ಕಟ್ಟ ಕಡೆ
ಆಸೆಯಿದು ಕೇಳಿ ಹೋಗು ಒಮ್ಮೆ 
ಆವರಿಸು ತಂಪು ಗಾಳಿಯಂತೆ 
ಬೇಸರವೇ ಆಗಲಾರದಂತೆ
ಪ್ರೀತಿಸುವೆ ಪ್ರಾಣ ನೀಡುವಂತೆ
ತ್ರಾಸು ಆಗಿಸಲೇ ಬ್ಯಾಡಲೇ
ಸುರ ಸಖಿಯೇ..

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...