Friday, 17 September 2021

ನೀನಿಲ್ಲದೆ ~~~

ನೀನಿಲ್ಲದೆ 

ತುಂಬಿ ಬಂದ ಕಣ್ಣಿಗಿಲ್ಲ ಯಾವ ಸಾಂತ್ವನ 
ನೀನಿಲ್ಲದೆ 
ಬಾಳ ದಾರಿ ಮುಂದೆ ಸಾಗಲಿಲ್ಲ ಕಾರಣ 
ನೀನಿಲ್ಲದೆ 
ಉಸಿರಾಟವಿನ್ನೇಕೆ ಅನಿಸುತ್ತಿದೆ ಈ ಕ್ಷಣ 
ನೀನಿಲ್ಲದೆ
ಮನಸಿಲ್ಲದೆ ಬದುಕುವ ಬದುಕು ಬಲು ದಾರುಣ

ಸೋತು ಹೋದ ಆಟವೇ 
ನೀತಿ ಪಾಠ ಹೇಳಿದೆ 
ಬಿಟ್ಟು ಕೊಡುವ ಅಭ್ಯಾಸವಾಗಿಹೋಗಿದೆ 
ಹತ್ತು ಹಲವು ತಿರುವಲಿ 
ಹೃದಯ ಕಳುವಾಗಿದೆ 
ಕಟ್ಟಿಕೊಂಡ ಕನಸ ಗೂಡು ಚೂರಾಗಿದೆ 
ಎಂದೋ ಕೊಟ್ಟ ಮಾತು, ಮತ್ತೆಲ್ಲೋ ಎದುರು ಸಿಕ್ಕು 
ಬಿಕ್ಕಿ ಬಿಕ್ಕಿ ಅಳುವ ಸದ್ದು ಜೀವವನ್ನೇ ಘಾಸಿ ಮಾಡಿದೆ... 

ಆಸೆ ಉಂಟು ಸಾವಿರ
ಆದರೆಲ್ಲ ಸ್ಥಾವರ
ದೂಡ ಬೇಕು ಎಲ್ಲವನ್ನೂ ನೀನೇ ಮುಂದಕೆ
ಶಾಪದಂತೆ ಮೂಡಲು
ಪ್ರೀತಿಯಲ್ಲಿ ಬೇಸರ
ಯಾವ ಲಾಭ ನೀಡಲಿಲ್ಲ ನಮ್ಮ ಹೂಡಿಕೆ
ಮಾಯಾ ಚಿಟ್ಟೆಯೊಂದು, 
ನನ್ನ ಹೂದೋಟದೆಲ್ಲ ಬಣ್ಣವನ್ನು ಹೊತ್ತು ಹೋಗಿದೆ...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...