Saturday, 18 September 2021

ಹೆಂಗಸರಿಗೆ ಬಂಗಾರ ಕೋರಿಕೆ

ಹೆಂಗಸರಿಗೆ ಬಂಗಾರ ಕೋರಿಕೆ

ಗಂಡಸರಿಗೆ ನೆಪವಾಯಿತು ಹೂಡಿಕೆ
ಹೆಂಗಸರಿಗೆ ಬಂಗಾರ ಕಾಣಿಕೆ
ತೊಡಿಸುವುದು ಗಂಡರ ಹೊಣೆಗಾರಿಕೆ

ಬಂಗಾರ ಆಚಾರಿಯ ಆಟಿಕೆ
ಬ್ಯಾಂಕಿನವರ ಪಾಲಿಗೆ ಅದು ಭದ್ರತೆ
ಸಾಲವೇನೋ ಕೊಡುತಾರೆ ಸುಲಭಕೆ
ಬಡ್ಡಿ ಕಟ್ಟಿ ಬಿಡಿಸಿಕೊಳ್ಳುವುದೇ ಹೆದರಿಕೆ

ವಾಕಿಗಂತ ಹೋಗಬ್ಯಾಡಿ‌ ಆಚೆಗೆ
ಪಾಲೀಶು ಮಾಡಿಸಿ ಆಭರಣಕೆ
ಅಸಲಿ-ನಕಲಿ ನೋಡರು ಕದಿಯೋದಕೆ
ಶೋಕಿ ಕೊನೆಗೆ ಎರಗಬಹುದು ನಿಮ್ಮ ಜೀವಕೆ

ಏ.ಸಿ ಮಳಿಗೆಯೊಳಗೆ ಕಾಲಿಟ್ಟಿರಿ
ಸಲ್ಯೂಟು ಹೊಡೆಯುವನು ಸೆಕ್ಯೂರಿಟಿ
ದೊಡ್ಡ ಒಡವೆ ಕೊಂಡರೆ ಕೂಲ್ಡ್ರಿಂಕು ಫ಼್ರೀ
ಚಿಕ್ಕ ಗ್ರಾಹಕರೋ ಕ್ಯಾರೇ ಇಲ್ಲ ರೀ

ಕೊಂಡಾಗ‌ ಒಡವೆಗಳು ಲಕ್ಷಕೆ
ಗಿರವಿಯಿಟ್ಟಾಗ ಬರದೇಕೋ ತೂಕಕೆ
ಕಲ್ಲು, ವ್ಯಾಕ್ಸು, ಮಣ್ಣು-ಮಸಿ ತಗೆಯಿರಿ
ಮಜೂರಿಗೆಂದು ಕೊಟ್ಟ ಮೊತ್ತ ಕಳೆಯಿರಿ

ಕೊನೆಗೆ ಉಳಿದ ಬಂಗಾರ ಕಷ್ಟಕೆ
ಆಗಬಹುದು ಎಂಬುದೇ ಮೂಢನಂಬಿಕೆ
ಶೇಟು ಕಟ್ಟಿಕೊಂಡ ದೊಡ್ಡ ಬಂಗಲೆ
ಪಾಠ ಕಲಿಯಬೇಕಿತ್ತು ನಾವಾಗಲೇ

ಮತ್ತೆ ಬಂತು ನೋಡಿ ಹೊಸ ಆಫ಼ರು
ಜಾಹೀರಾತು ನೀಡಬರುವ ದೊಡ್ಡ ಲೋಫ಼ರು
ಈ ಜೇಬಿನಿಂದ ಆ ಜೇಬಿಗೆ
ಪೈಸ ಉಳಿಸದೆ ಎಗರಿಸುವ ನಿಸ್ಸೀಮರು...

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...