ಊರ ಬಿಟ್ಟು ಬಂದವರು
ಸೂರನ್ನೇ ಕಾಣದವರು
ಎದುರು ಸಿಕ್ಕರು
ಒಂದು ಮಳೆಗಾಲದ ರಾತ್ರಿ
ಕನಸು ಬತ್ತಿದ ಕಣ್ಣು
ಉಸಿರಲಿ ಆರದ ಹುಣ್ಣು
ಮುಗುಳು ನಕ್ಕರು
ಅದು ನೋವೆಂಬುದು ಖಾತ್ರಿ
ಒಬ್ಬರ ಮನೆಯಲ್ಲಿ
ಹಬ್ಬದ ಊಟ ಸವಿ
ಮತ್ತೊಬ್ಬರಿಗಲ್ಲಿ
ಊಟವೆಂಬುದೇ ಹಬ್ಬ
ಹಸಿವನ್ನು ಹಂಚುವಲ್ಲಿ
ತೋರಿದ ನಿಷ್ಠೆಯ ನೀ
ಅನ್ನ ಹಂಚುವಲ್ಲಿ
ಯಾಕೆ ತೋರಲಿಲ್ಲ ದೇವರೇ?
No comments:
Post a Comment