**ಪಲ್ಲವಿ**
ನಿನ್ನದೇ ಹೆಸರನ್ನು ಕರೆವೆ, ಕೇಳಿ ನೋಡು ಆದರೆ
ಬೇಗುದಿ ಮನದಾಳದಿಂದ ಮೂಡಿ ಬಂತು ಈ ಕರೆ
ನಿನ್ನದೇ ಹೆಸರನ್ನು ಕರೆವೆ...
**ಚಾರಣ ೧**
ಎಂದಿನಿಂದಲೋ ನಡೆದಿದೆ, ಪ್ರೇಮದ ದೀಪೋತ್ಸವ (೨)
ನೀನು ಹಚ್ಚಿದ ಮೇಣದಿ, ನಾನು ಕರಗುವ ಸಂಭವ
ದೂರಕೆ ಕರೆದೊಯ್ಯುವಾಗ, ಹೇಳ ಬೇಡ ಎಲ್ಲಿಗೆ
ಸಾಗುವೆ ತುಸು ಭಾರವಾಗಿ, ಹಗುರವಾಗಿಸು ಮೆಲ್ಲಗೆ
ನಿನ್ನದೇ ಹೆಸರನ್ನು ಕರೆವೆ...
**ಚಾರಣ ೨**
ನಿನ್ನ ಗಮನದ ಗಮ್ಯ ನಾ, ನನ್ನ ಗಮನ ನಿನ್ನೆಡೆ (೨)
ನೀನು ಇರಲು ಖುಷಿಗಳು ಸಿಕ್ಕಿದಂತೆ ಒಂದೆಡೆ
ತೇಲಿಸು ಆ ಕಣ್ಣಿನೊಳಗೆ, ಆಸೆ ಹೊತ್ತ ಹಡಗನು
ಆಲಿಸು ಪಿಸುಮಾತಿನಲ್ಲಿ ಹೇಳುವಾಸೆ ಒಲವನು
ನಿನ್ನದೇ ಹೆಸರನ್ನು ಕರೆವೆ...
**ಚಾರಣ ೩**
ನೀನು ಸೋಕುವ ವೇಳೆಗೆ, ವೀಣೆಯಾಗುವ ಹಂಬಲ (೨)
ಮಾಗಬೇಕಿದೆ ಕಾವಿಗೆ, ಒಮ್ಮೆ ಎದೆಗೆ ಒರಗಲಾ?
ಹೇರು ನೀ ಕನಸೆಲ್ಲವನ್ನು, ನಾನೇ ಹೊತ್ತು ತಣಿಯುವೆ
ಖಾಲಿ ಉಳಿದ ಜಾಗದಲ್ಲಿ ನನ್ನೇ ತುಂಬಿ ಕಳಿಸುವೆ
ನಿನ್ನದೇ ಹೆಸರನ್ನು ಕರೆವೆ...
ಹಾಡು
---------
https://soundcloud.com/bharath-m-venkataswamy/i4j0odsz5dcy
No comments:
Post a Comment