ಮತ್ತೆ ಮತ್ತೆ ಸದ್ದು ಮಾಡಿದಂತೆ
ಹದ್ದು ಮೀರಿ ಪುಟ್ಟ ಗುಂಡಿಗೆ
ನಿನ್ನ ಜೊತೆ ಸಾಗಿ ಬಂದ ಮೇಲೆ
ಮತ್ತು ಇನ್ನೂ ಹೆಚ್ಚಿದಂತಿದೆ... ಯೇ
ನಾಳೆಗಳ ಪರಿಚಯಿಸೋ ಪ್ರೀತಿ
ರೋಮಾಂಚನಗೊಳಿಸೋ ಪ್ರೀತಿ
ಬಾಳಿಗೆ ನೆರವಾಗುವ ರೀತಿಯ ಹೇಗೆ ಹಾಡಿ ಹೊಗಳುವುದು...
ಮತ್ತೆ ಮತ್ತೆ ಸದ್ದು ಮಾಡಿದಂತೆ
ಹದ್ದು ಮೀರಿ ಪುಟ್ಟ ಗುಂಡಿಗೆ
ನಿನ್ನ ಜೊತೆ ಸಾಗಿ ಬಂದ ಮೇಲೆ
ಮತ್ತು ಇನ್ನೂ ಹೆಚ್ಚಿದಂತಿದೆ..
ಬಣಗುಡುವ ಮರದಲಿ ಚಿಗುರಿನ
ಹೊಸ ಬಯಕೆಗಳ ಚಿಲುಮೆ
ಭ್ರಮರಗಳು ವಲಸೆ ಬಂದಿವೆ
ಸುಮಗಳ ಸಳೆತದ ಮಹಿಮೆ
ಅನುಭವಿಸಿ ಹೊಸೆಯುವ ಪದಗಳು
ಕಿರು ಕವಿತೆಗಳಾಗುತಿವೆ
ತುದಿಯಲ್ಲೇ ಉಳಿದರೂ ಮಾತು
ನಾಲಿಗೆಯು ತೊದಲುತಿದೆ
ಈ ನಡಿಗೆ.. ಈ ನಡಿಗೆ
ನಿನ್ನೆಡೆಗೆ
ಪ್ರತಿ ಗಳಿಗೆ... ಪ್ರತಿ ಗಳಿಗೆ
No comments:
Post a Comment