Thursday, 15 December 2022

ಯಾರು ಕಂಡವರು

ಯಾರು ಕಂಡವರು 

ಆ ಕಡಲಿನ ಆಳವನು 
ಯಾರು ಬಲ್ಲವರು 
ತಂಗಾಳಿ ಮೂಲವನು 
ಎಲ್ಲಿ ದೊರಕುವುದು 
ನೋವಿರದ ಗೆಲುವುಗಳು 
ನಮ್ಮ ನಡುವಿನಲೇ 
ಇವೆ ಸಾಧನೆ ಮೂಲಗಳು 
ಬೀಳುವ ಏಳುವ 
ಅಲೆಗಳಿಗೆ ದಣಿವೆಲ್ಲಿ 
ಕಾದಿರೋ ತೀರಕೆ 
ಏಕಾಂತದ ದಿಗಿಲೆಲ್ಲಿ?

ಕೊಟ್ಟ ಮಾತನು ತಪ್ಪ ಬಾರದು 
ಏನೇ ಆದರೂ ಬಾಳಿನಲಿ 
ಬಿಟ್ಟು ಬಂದಿರೋ ಹೆಜ್ಜೆ ಗುರುತ
ಬರುವವರು ಹಿಂಬಾಲಿಸಲಿ 
ಕಟ್ಟಿಕೊಂಡಿರೋ ನೆನಪುಗಳೇ 
ನಾಳೆಗಳ ಮಾಲಾರ್ಪಣೆಗೆ 
ಸುತ್ತ ಮುತ್ತಲೂ ಪಸರಿಸುವ 
ಎಂದೂ ಬಾಡದ ಮುಗುಳುನಗೆ 
ಇರಲಿ ಸಹನೆ 
ಮಮತೆ, ಕರುಣೆ 
ಬಾಳು ಅಂದುಕೊಂಡಿದ್ದಕ್ಕಿಂತಲೂ ಸುಂದರ 
ಬೇಡ ಬಣ್ಣ ಹಚ್ಚಿ ಬಂದರೂನು ಪಂಜರ 
ಹಾರೋಣ ಬಾನಿನೆತ್ತರ 

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...