ನಂದಗೋಕುಲದಲ್ಲಿ
ಮಂದಹಾಸವ ಬೀರಿ
ಚಂದದಿ ನಲಿದಿರುವ ಗೋಪಾಲ
ಬೆಣ್ಣೆ ಗಡಿಗೆ ಕೆಡವಿ
ಉಂಡು ಎಲ್ಲವ ತಡವಿ
ಬಂಡರ ಬಂಡ ನೀನು ಶ್ರೀಲೋಲ
ಬಂದು ಹೋದವರೆಲ್ಲ
ಕೆನ್ನೆ ಗಿಂಡುವರಲ್ಲ
ಕದ್ದ ಕೈಯ್ಯಲಿ ಸಿಕ್ಕರೆ ಅದೇ ಶಿಕ್ಷೆ
ಸಲಹು ಎಂದವರ
ಮೊರೆಯ ಕೇಳುತಲೇ
ಎರಗಿ ನೀಡುವೆ ನೀ ಶ್ರೀರಕ್ಷೆ
ಕೊಳಲ ಊದುತಲೇ
ಮಾಡುವೆ ಜೀವನ ಪಾಠವನು
ಕಡಲ ಆಳದ ಆ
ಮರ್ಮಗಳ ಬಲ್ಲವನು
ಕಣ್ಣಲೆ ಹೆಣ್ಮನವ
ಸೆಳೆಯುವುದೇ ನಿನ್ನ ಗುಣ
ದುಷ್ಟರ ಪಾಲಿಗೆ ನೀ
ದುಃಸ್ವಪ್ನ
No comments:
Post a Comment