ಆದಾಗಿಗಿಂತ ಗಾಯ
ಕಾಡೋದು ಆರೋವಾಗ
ಏನೊಂದೂ ತೋಚದು ಈಗ
ಈ ದಾರಿ ನಿಂತಿರುವಾಗ
ನೀ ದೂರವಾದೆ ಏಕೆ
ಕಣ್ಣೀರು ಜಾರೋವಾಗ...
ಬೇಕೆನ್ನುವಾಗ ಬರದೆ
ಸಾಕೆನ್ನುವಾಗ ಬರುವೆ
ಕನಸೆಂಬ ಕನ್ನಡಿಯಲ್ಲಿ
ನೀ ಮಾತ್ರ ಏತಕೋ ನಗುವೆ
ಮಳೆಗಾಲವಾದರೂ ಇನ್ನೂ
ಬಿರುಕಲ್ಲೇ ನನ್ನಯ ಜಾಗ
ನೀ ಆಗಬೇಕಿದೆ ಇನ್ನೂ
ಈ ನನ್ನ ಜೀವದ ಭಾಗ
ನೀ ದೂರವಾದೆ ಏಕೆ
ಕಣ್ಣೀರು ಜಾರೋವಾಗ...
ಇನ್ನೆಲ್ಲಿದೆ ವಿರಾಮ
ಅಲೆದಾಡಿಸಿರುವೆ ಬಿಡದೇ
ಬಾಳೆಂಬ ಕಾದಂಬರಿಯ
ಕಳುವಾದ ಹಾಳೆಯು ನಿನದೇ
ಗಡಿಯಾರ ಮುಳ್ಳಿನ ಹಾಗೆ
ಅನುರಾಗ ಇರಿದಿರುವಾಗ
ಬಿಡಿಯಾಗಿ ಬಿಡಿಸಿದರೂನೂ
ಕಹಿ ನೆನಪೇ ಮೂಡಿರುವಾಗ
ನೀ ದೂರವಾದೆ ಏಕೆ
ಕಣ್ಣೀರು ಜಾರೋವಾಗ...
No comments:
Post a Comment