Thursday, 23 May 2013

ಮಳೆ ನಿಂತು ಹೋದಮೇಲೆ















ಮಳೆ ನಿಂತ ಮರುಗಳಿಗೆ
ಇಳೆಗೆ ಚೂರು ಬರವಸೆಯ-
-ಒದಗಿಸಿತ್ತು ಹನಿಯ ಕಾಯ್ದಿರಿಸಿದ ಎಲೆಯೊಂದು

ಬಿದ್ದು ತಣ್ಣಗಾಗಿದ್ದ
ನಿಂತ ನೀರಿನಲೆಯ ಬಲೆ
ಸೆರೆ ಹಿಡಿಯಿತು ಬಿದ್ದ ಹನಿಯ ಸಾಲಿಗೆ ಮತ್ತೊಂದು !!!


                                                --ರತ್ನಸುತ


1 comment:

  1. ಭರತ್ ಎರಡನ್ನೂ ಹನಿಗವನಗಳ ಲೆಕ್ಕದಲ್ಲೇ ನೋಡುತ್ತೇನೆ.

    ಮೊದಲನೇ ಹನಿಯಲ್ಲಿ, ಯಾವುದೋ ಭರವಸೆಯ ಕಿರಣ ಗೋಚರ.
    ಎರಡನೇ ಹನಿಯಲ್ಲಿ, ಕಾಪಾಡುವ, ಕಾಯುವ ಪರಿಯೇ ಸೋಜಿಗ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...