ಅಂದು ನಾವು ಸೇರಲೇ ಬೇಕಾದ ಅನಿವಾರ್ಯ ಪರಿಸ್ಥಿತಿ. ಆ ಹೊತ್ತಿಗೆ ತಿಳಿ ನೀಲಿ ಆಗಸ ಗೊಚರಿಸಿತ್ತು.
ಒಬ್ಬರನ್ನೊಬ್ಬರು ಕಂಡೂ ಕಾಣದಂತೆ ನಟಿಸಿದೆವು, ನಾ ಮುಂದೆ ಹೊರಟೆ ಆಕೆ ಹಿಂಬಾಲಿಸಿದಳು.
ಒಂದು ಮರದ ಮರೆಯ ಏಕಾಂತ ಸ್ಥಳದಲ್ಲಿ ನಮಗೆಂದೇ ಸಿದ್ದಪಡಿಸಿದಂತಿತ್ತು ಮೇಜು, ಕುರ್ಚಿ.
ನಾ ಕುಳಿತೆ, ಆಕೆ ನನ್ನ ಎದುರು ಅಸಹಾಯಕಳಂತೆ ಕುಳಿತಳು.
ನಿಮಿಷಗಳುರುಳಿದವು ಮಾತಿನ ಸುಳಿವಿರದೇ, ಬೀಸು ಗಾಳಿ ಬಿರುಸಾಗಿ ಅವಳ ಕೂದಲ ಕದಡಿತು, ನನ್ನ ಮನಸನ್ನು ಕೂಡ.
ಕೆಲ ಹೊತ್ತು ಕಳೆದು ಮಾಣಿ ಆರ್ಡರ್ ಕೇಳಲು ಬಂದ, ನಾನು ಎರಡು ಚಹಾ ಹೇಳಿದೆ (ಆಕೆಗೆ ಚಹಾ ಅಂದರೆ ಇಷ್ಟ)
ಆಕೆ, "ಚಹಾ ಬೇಡ, ಕಾಫಿ" ಅಂದಳು (ನನಗೆ ಕಾಫಿ ಅಂದರೆ ಇಷ್ಟ)
ಬಿಸಿ ಲೋಟಗಳು ನಿಮಿಷದಲ್ಲೇ ನಮ್ಮ ಮುಂದಿದ್ದವು, ಅಷ್ಟರೊಳಗೆ ನೀಲಿ ಆಗಸಕ್ಕೆ ಗ್ರಹಣ ಹಿಡಿದಂತೆ ಮೋಡಗಳು ಕವಿದವು.
ಪ್ರಯಾಣ ಬೆಳೆಸಿ ಬೆಂದ ಮೋಡಗಳು ಬೆವರಿ ಮಳೆಯಾಗಿಸಿದವು,ಇನ್ನೂ ಇಬ್ಬರ ತುಟಿ ಬಾಗಿಲು ಬಿಚ್ಚಿರಲಿಲ್ಲ.
ಮಳೆ ಜೋರಾಯಿತು, ಹಣ್ಣೆಲೆಗಳೆಲ್ಲಾ ಉದುರಿ ಸುತ್ತಲೂ ಚೆಲ್ಲಾಡಿದವು, ಇದ ಗಮನಿಸುತ್ತಲೇ ಕಾಫಿ ಕುಡಿವುದ ಮರೆತೆವು.
ಮಳೆ ಅಬ್ಬರ ಕಡಿಮೆಯಾಗಿ ತುಂತುರು ಹಿಡಿಯಿತು, ನಿಂತ ನೀರ ಮೇಲೆ ಗುಳ್ಳೆಗಳನ್ನೆಬ್ಬಿಸಿ,
ಮರದೆಲೆಗಳು ಆಗ ತಾನೇ ತಮ್ಮೊಡಲ ಹನಿಗಳ ಬೀಳ್ಗೊಡುಗೆಯಲ್ಲಿ ತೊಡಗಿದ್ದವು.
ಮಾತಿಗೆ ಎದುರು ನೋಡುತ್ತಲೇ ಪಾಪ ಮಳೆಯೂ ನಿಂತಿತ್ತು, ಆದರೆ ಮಾತಿಗೆ ಆ ಪ್ರಜ್ಞೆ ಇರಲಿಲ್ಲಾ.
ಸಹನೆ ಮೀರಿದ ಮಾಣಿ ಲೋಟಗಳನ್ನ ತೆರವುಗೊಳಿಸಿದ, ಅದು ತಿಳಿದೂ ತಿಳಿಯದಂತೆ ನಟಿಸಿದೆವು.
ಒಬ್ಬರನ್ನೊಬ್ಬರು ನೋಡುವ ಛಲವಿಲ್ಲದೆ; ನೋಟ ಬೇರೆಡೆ ಎಲ್ಲೋ ನೆಡುವ ಪ್ರಯತ್ನ ಸಫಲವಾಯಿತು.
ಸಮಯವೂ ಮೀರಿತ್ತು, ಗಮನಕ್ಕೆ ಬಂದ ಇಬ್ಬರೂ ಎದ್ದು ಹೊರಡಲು ಸಜ್ಜಾದೆವು. ಈ ಬಾರಿ ಆಕೆ ಮುಂದೆ, ನಾ ಹಿಂದೆ.
ನ್ಯಾಯಾದೀಶರು ಕೊಟ್ಟ ಗಡುವು ಮುಗಿದಿತ್ತು, ಇನ್ನೇನಿದ್ದರೂ ಒಂದು ಸಹಿ ಹಾಕುವ ಸರದಿ ಇಬ್ಬರದ್ದೂ.
ಮುಂದೆ; ನಾನೊಂದು ತೀರ, ಅವಳೊಂದು ತೀರ.
ದೂರಾಗಿಸಲು ಸಹಿ ಹಾಕಿದ ಕಾಗದವೇ ಸಾಕ್ಷಿ ಪತ್ರ.
ಕೊನೆಗೊಮ್ಮೆ ಅವಳ ನೋಡಬೇಕನಿಸಿ ತಿರುಗಿದೆ. ಅವಳೂ ತಿರುಗಿದಳು.
ಪರಸ್ಪರ ಯಾವುದೇ ಅಹಂಗಳು ತಡೆಯಲಿಲ್ಲ, ಅದು ನಮ್ಮ ಜೀವನದ ನಿಷ್ಕಲ್ಮಶ, ಸ್ಮರಣೀಯ ಕ್ಷಣಗಳಲ್ಲೊಂದು.
ಆಗ ಜಿನುಗಿದ ಕಂಬನಿಯೇ ನಮ್ಮಿಬ್ಬರ ಪ್ರೇಮ ಕೂಸು,
ಅದ ಅಲ್ಲೇ ಒರೆಸಿಕೊಂಡು ಮಾಡಿದೆವು ಭ್ರೂಣಹತ್ಯೆ.
ಮತ್ತೆ ಇಬ್ಬರಿಗೂ ಪ್ರೀತಿ ಹುಟ್ಟಿತ್ತು, ಆದರೆ ಸಂದರ್ಭ ಅನಾವರಣಗೊಳಿಸಲು ಸೂಕ್ತವಾಗಿರಲಿಲ್ಲ.
ಹೇಳಬೇಕನಿಸಿದ್ದು ಮತ್ತೊಮ್ಮೆ "I LOVE YOU"
ಆದರೆ ........
ಅಪಸ್ವರವ ನುಡಿಸಿ
ವಿಷ ಬಡಿತ ಬಡಿಸಿದ್ದ
ಹೃದಯ ಹಾಡಿತ್ತು
ಹಠವನ್ನು ಜಯಿಸದೇ
ಸೋಲನ್ನೇ ಸವರಿದ್ದ
ಪ್ರೀತಿ ಪರಿತಪಿಸಿತ್ತು
ಮುದ್ದು ಬರಿಸದೇ
ಸದಾ ದೂರುಳಿಸುತಿದ್ದ
ಮೌನ ನುಡಿದಿತ್ತು
ಹೆಸರನ್ನು ಬೆಸೆಯದೇ
ನಿತ್ಯ ಅಳಿಸುತ್ತಿದ್ದ
ಉಸಿರು ಪಿಸುಗುಟ್ಟಿತ್ತು
ಬಿಟ್ಟು ಕೊಡಲಾಗದೇ
ಎಂದಿನಂತೆ ನೊಂದು
ಮನಸು ಬಿಕ್ಕಿತು
ಅಲ್ವಿದಾ.... ಅಲ್ವಿದಾ..... (ಮತ್ತೆ ಸೇರುವ ತನಕ)
--ರತ್ನಸುತ

No comments:
Post a Comment