ಮೂಗು ಮುರಿದ ಚಂದ್ರನ ಕುರಿತು
ತಮಾಷೆ ಮಾಡುತ್ತಿದ್ದೆ;
ತನ್ನ ಮುಖದ ಮೊಡವೆಗಳ
ಎಣಿಸೆಣಿಸಿ
ನನ್ನ ಮುಖವ ತೋರಿಸಿ
ಅಣುಕಿಸುತ್ತಿದ್ದೆ!!
ತಮಾಷೆ ಮಾಡುತ್ತಿದ್ದೆ;
ತನ್ನ ಮುಖದ ಮೊಡವೆಗಳ
ಎಣಿಸೆಣಿಸಿ
ನನ್ನ ಮುಖವ ತೋರಿಸಿ
ಅಣುಕಿಸುತ್ತಿದ್ದೆ!!
ಕೆಂಡವಾದವನು ಸುಡಲಿಲ್ಲ
ಮತ್ತದೇ ತಂಪು ಬೆಳದಿಂಗಳ
ನನ್ನ ಮೈಮೇಲೆ ಹೊದಿಸಿಬಿಟ್ಟ;
ನಾನೂ ತಣ್ಣಗಾದೆ!!
ಮತ್ತದೇ ತಂಪು ಬೆಳದಿಂಗಳ
ನನ್ನ ಮೈಮೇಲೆ ಹೊದಿಸಿಬಿಟ್ಟ;
ನಾನೂ ತಣ್ಣಗಾದೆ!!
ಇಬ್ಬರೂ ಕೂತು
ತಲಾ ಒಂದೊಂದು
ಬಾಟಲಿ ಬೀರು ಸೇವಿಸಿ
ವಿರಹಿಗಳಂತೆ ಕಣ್ಣೀರಿಡುತ್ತ
ನಮ್ನಮ್ಮ ಕಥೆಗಳ ಹಂಚಿಕೊಂಡೆವು;
ತಲಾ ಒಂದೊಂದು
ಬಾಟಲಿ ಬೀರು ಸೇವಿಸಿ
ವಿರಹಿಗಳಂತೆ ಕಣ್ಣೀರಿಡುತ್ತ
ನಮ್ನಮ್ಮ ಕಥೆಗಳ ಹಂಚಿಕೊಂಡೆವು;
ಹಂಚಿಕೊಂಡೆವು ಅನ್ನುವುದಕ್ಕಿಂತ
ಕಕ್ಕಿಕೊಂಡೆವು ಅಂದರೆ ವಾಸಿ;
ಯಾಕಂದರೆ
ನನ್ನ ಕಥೆ ನನಗೆ
ತನ್ನ ಕಥೆ ತನಗೆ
ಅಸಡ್ಡೆ ಮೂಡಿಸುವಷ್ಟು ಕಹಿಯಾಗಿದ್ದವು;
ಮನ ಭಾರ ಹಗುರಾಗಿಸಲು
ಮತ್ತೊಂದು ಬಾಟಲಿ ಕೈಗೆತ್ತಿಕೊಂಡೆವು!!
ಕಕ್ಕಿಕೊಂಡೆವು ಅಂದರೆ ವಾಸಿ;
ಯಾಕಂದರೆ
ನನ್ನ ಕಥೆ ನನಗೆ
ತನ್ನ ಕಥೆ ತನಗೆ
ಅಸಡ್ಡೆ ಮೂಡಿಸುವಷ್ಟು ಕಹಿಯಾಗಿದ್ದವು;
ಮನ ಭಾರ ಹಗುರಾಗಿಸಲು
ಮತ್ತೊಂದು ಬಾಟಲಿ ಕೈಗೆತ್ತಿಕೊಂಡೆವು!!
ಅವನೇನೋ ಆಕಾಶದ ಉದ್ದಗಲಕ್ಕೂ
ಅಮಲಿನಲಿ ತೇಲಾಡುತ್ತಿದ್ದನಂದುಕೊಂಡೆ
ಆದರೆ
ನಾ ಆಯ ತಪ್ಪಿ ಬಿದ್ದ
ಮೋರಿಯೊಳಗೂ ತಾನು ಬಿದ್ದು
ಎದ್ದು ಹೋಗಿರುವ ಬಗ್ಗೆ
ಸಾಕ್ಷಿ ಸಿಕ್ಕಿತು!!
ಅಮಲಿನಲಿ ತೇಲಾಡುತ್ತಿದ್ದನಂದುಕೊಂಡೆ
ಆದರೆ
ನಾ ಆಯ ತಪ್ಪಿ ಬಿದ್ದ
ಮೋರಿಯೊಳಗೂ ತಾನು ಬಿದ್ದು
ಎದ್ದು ಹೋಗಿರುವ ಬಗ್ಗೆ
ಸಾಕ್ಷಿ ಸಿಕ್ಕಿತು!!
ಈಗ ನಾನು ರಾಡಿಯಾಗಿದ್ದೆ
ಚಂದ್ರ ಲೇವಡಿ ಮಾಡುತ್ತ ನಗಲಾರಂಭಿಸಿದ;
ಇನ್ನೂ ಅರ್ಧ ಉಳಿದ ಬೀರು ಬಾಟಲಿಯನ್ನ
ತನ್ನತ್ತ ತೂರಿದೆ,
ಅದು ಸೀದ ನನ್ನ ತಲೆಗೇ ಬಡಿಯಿತು;
ಚಂದ್ರ ಲೇವಡಿ ಮಾಡುತ್ತ ನಗಲಾರಂಭಿಸಿದ;
ಇನ್ನೂ ಅರ್ಧ ಉಳಿದ ಬೀರು ಬಾಟಲಿಯನ್ನ
ತನ್ನತ್ತ ತೂರಿದೆ,
ಅದು ಸೀದ ನನ್ನ ತಲೆಗೇ ಬಡಿಯಿತು;
ತಲೆಗೆ ಸುತ್ತಿಕೊಂಡ ಬ್ಯಾಂಡೇಜು
ಥೇಟು ಚಂದ್ರನ ತಲೆ ಮೇಲೆ ಹೊತ್ತಂತೆ ಕಂಡು
ಊರೆಲ್ಲ ನಕ್ಕಿತು;
ನಕ್ಕದ್ದು ನನ್ನ ನೋಡಿಯೋ
ಇಲ್ಲ
ಚಂದ್ರನನ್ನ ನೋಡಿಯೋ
ಇನ್ನೂ ಅರ್ಥವಾಗುತ್ತಿಲ್ಲ!!
ಥೇಟು ಚಂದ್ರನ ತಲೆ ಮೇಲೆ ಹೊತ್ತಂತೆ ಕಂಡು
ಊರೆಲ್ಲ ನಕ್ಕಿತು;
ನಕ್ಕದ್ದು ನನ್ನ ನೋಡಿಯೋ
ಇಲ್ಲ
ಚಂದ್ರನನ್ನ ನೋಡಿಯೋ
ಇನ್ನೂ ಅರ್ಥವಾಗುತ್ತಿಲ್ಲ!!
-- ರತ್ನಸುತ
ಇಬ್ಬರೂ ಕೂತು
ReplyDeleteತಲಾ ಒಂದೊಂದು
ಬಾಟಲಿ ಬೀರು ಸೇವಿಸಿ
ವಿರಹಿಗಳಂತೆ ಕಣ್ಣೀರಿಡುತ್ತ
ನಮ್ಮ ಕಥೆಗಳನ್ನು ಯಾವಾಗ ಹಂಚಿಕೊಳ್ಳೋಣ ಭರತ ಮುನಿಗಳೇ?