ಮಳೆ ಬರುವ ಹಾಗಿತ್ತು
ಉಪ್ಪರಿಗೆ ಸೋರುವ ಕಡೆಯಲ್ಲೆಲ್ಲ
ಇದ್ದ-ಬದ್ದ ಪಾತ್ರೆ ಪಗಡೆಗಳ
ಅಂದಾಜಿನ ಅಂತರದಲ್ಲಿಟ್ಟು
ಅಮ್ಮ ಒಲೆ ಉರಿಸಿದಳು;
ಚಿಲುಮೆಯೊಳಗಿಂದ ಬೆಳದಿಂಗಳು
ಸೀದ ಗಡಿಗೆಯೊಳಗೆ
ಮುಖ ಮಾಡಿ ಸೊರಗಿತ್ತು!!
ಬೆವರ ಹರಿವಿನ ತಡೆಗೆ
ಸೆರಗು ಇನ್ನಷ್ಟು ಸುಕ್ಕಾಗಿ
ಕೆನ್ನೆಗಂಟಿದ ಮಸಿಯ ಕಲೆ
ಕನ್ನಡಿಗೆ ಭಾರವಾಗಿತ್ತು;
ಹಸಿ ಸೌದೆ ಆಗಾಗ ಹೊಗೆ ಉಗುಳಿ
ಚಂದ್ರನ ಮುಖಕ್ಕೂ ಕಲೆ,
ಅಮ್ಮಳಿಗೊಬ್ಬ ಗೆಳೆಯ
ಕಷ್ಟ ಹಂಚಿಕೊಳ್ಳಲು!!
ಊದುಗೊಳವೆಯ ಉಸಿರಿಗೆ
ನಾನಾ ಬಿಕ್ಕಟ್ಟು,
ಈ ತುದಿಯಿಂದಾ ತುದಿ
ತಲುಪುವಷ್ಟರಲ್ಲಿ ಎದೆ ಖಾಲಿ ಬುಡ್ಡೆ;
ಕಣ್ಣು ಕಿವುಚಿ
ನೀರು ಜಿನುಗಿ ಬೆಂಕಿಗೆ ಬಿದ್ದು,
ಅಲ್ಲಿ ಒಂದು ಅಗ್ನಿ ಹಾಡು
ಒಲೆ ಗೂಡ ದಾಟಿ ಬರಲಿಲ್ಲ!!
ಅಪ್ಪ ಹಣೆಗೆ ಕೈ ಆನಿಸಿ
ತಡೆ ಸಂಜೆ ಆಕಾಶವ ಕಂಡು
ಗೊಣಗಿಕೊಂಡೇ ಒಳ ಬರುತ್ತಾನೆ;
ಆಗ ನಗುವುದು ಸಲ್ಲ,
ಅಳುವುದನ್ನೂ ಅವ ಸಹಿಸೊಲ್ಲ,
ಅವನೊಳಗೇ ಒಂದು
ಏಕಪಾತ್ರಾಭಿನಯದ ರೀತಿ,
ಅದು ಅವನಿಗಷ್ಟೇ ಪ್ರೀತಿ!!
ವಿಮಾನ ಹತ್ತಿರದಲ್ಲೇ ಹಾರಿ
ಮೌನವ ಛೇಡಿಸಿ ನಕ್ಕ ಸದ್ದು,
ಸಣ್ಣ ಬಿರುಗಾಳಿಗೆ
ಮುದಿ ತೆಂಗಿನ ಮರದ ಒಂಟಿ ಗರಿಯ
ಋಣ ಮುಕ್ತ ಪಯಣ,
ಬುಡ್ಡಿ ದೀಪವ ನಂದಿಸಲು
ನಾನೇ ಮರೆತು ತೆರೆದು ಬಿಟ್ಟ ಕಿಟಕಿ;
ಮುಚ್ಚ ಹೋದರಲ್ಲಿ ಭಾರೀ ಮಿಂಚು!!
ಅಪ್ಪನ ಸಿಟ್ಟು ಫಲಿಸಿತು,
ಅಮ್ಮಳ ಅಂದಾಜು ತಪ್ಪಲಿಲ್ಲ
ಕಿಂಚಿಷ್ಟೂ ಜರುಗಿಸದಂತೆ
ಸೋರಿದವೆಲ್ಲವೂ ಸೀದ ಪಾತ್ರೆಯೊಳಗೆ;
ಅಪ್ಪನ ಹಸ್ತ ಈಗ ನಗುತಿದೆ,
ಪಠ್ಯ ಚೀಲಕ್ಕೆ ಬಿಡುವು!!
ತಣಿವು ತಟ್ಟಿದ ಗೋಡೆ
ಚಳಿಗೆ ನಡುಗುತಿದೆ,
ಒಲೆಯ ಮೇಗಡೆ ಬೆಂದ ಗಂಜಿ,
ಹಸಿದ ಹೊಟ್ಟೆ,
ಸ್ವಾಭಿಮಾನ ಬಿಡದೆ
ಹಸಿದಲ್ಲೇ ಉಳಿದ ಚಂದ್ರ!!
-- ರತ್ನಸುತ
ಉಪ್ಪರಿಗೆ ಸೋರುವ ಕಡೆಯಲ್ಲೆಲ್ಲ
ಇದ್ದ-ಬದ್ದ ಪಾತ್ರೆ ಪಗಡೆಗಳ
ಅಂದಾಜಿನ ಅಂತರದಲ್ಲಿಟ್ಟು
ಅಮ್ಮ ಒಲೆ ಉರಿಸಿದಳು;
ಚಿಲುಮೆಯೊಳಗಿಂದ ಬೆಳದಿಂಗಳು
ಸೀದ ಗಡಿಗೆಯೊಳಗೆ
ಮುಖ ಮಾಡಿ ಸೊರಗಿತ್ತು!!
ಬೆವರ ಹರಿವಿನ ತಡೆಗೆ
ಸೆರಗು ಇನ್ನಷ್ಟು ಸುಕ್ಕಾಗಿ
ಕೆನ್ನೆಗಂಟಿದ ಮಸಿಯ ಕಲೆ
ಕನ್ನಡಿಗೆ ಭಾರವಾಗಿತ್ತು;
ಹಸಿ ಸೌದೆ ಆಗಾಗ ಹೊಗೆ ಉಗುಳಿ
ಚಂದ್ರನ ಮುಖಕ್ಕೂ ಕಲೆ,
ಅಮ್ಮಳಿಗೊಬ್ಬ ಗೆಳೆಯ
ಕಷ್ಟ ಹಂಚಿಕೊಳ್ಳಲು!!
ಊದುಗೊಳವೆಯ ಉಸಿರಿಗೆ
ನಾನಾ ಬಿಕ್ಕಟ್ಟು,
ಈ ತುದಿಯಿಂದಾ ತುದಿ
ತಲುಪುವಷ್ಟರಲ್ಲಿ ಎದೆ ಖಾಲಿ ಬುಡ್ಡೆ;
ಕಣ್ಣು ಕಿವುಚಿ
ನೀರು ಜಿನುಗಿ ಬೆಂಕಿಗೆ ಬಿದ್ದು,
ಅಲ್ಲಿ ಒಂದು ಅಗ್ನಿ ಹಾಡು
ಒಲೆ ಗೂಡ ದಾಟಿ ಬರಲಿಲ್ಲ!!
ಅಪ್ಪ ಹಣೆಗೆ ಕೈ ಆನಿಸಿ
ತಡೆ ಸಂಜೆ ಆಕಾಶವ ಕಂಡು
ಗೊಣಗಿಕೊಂಡೇ ಒಳ ಬರುತ್ತಾನೆ;
ಆಗ ನಗುವುದು ಸಲ್ಲ,
ಅಳುವುದನ್ನೂ ಅವ ಸಹಿಸೊಲ್ಲ,
ಅವನೊಳಗೇ ಒಂದು
ಏಕಪಾತ್ರಾಭಿನಯದ ರೀತಿ,
ಅದು ಅವನಿಗಷ್ಟೇ ಪ್ರೀತಿ!!
ವಿಮಾನ ಹತ್ತಿರದಲ್ಲೇ ಹಾರಿ
ಮೌನವ ಛೇಡಿಸಿ ನಕ್ಕ ಸದ್ದು,
ಸಣ್ಣ ಬಿರುಗಾಳಿಗೆ
ಮುದಿ ತೆಂಗಿನ ಮರದ ಒಂಟಿ ಗರಿಯ
ಋಣ ಮುಕ್ತ ಪಯಣ,
ಬುಡ್ಡಿ ದೀಪವ ನಂದಿಸಲು
ನಾನೇ ಮರೆತು ತೆರೆದು ಬಿಟ್ಟ ಕಿಟಕಿ;
ಮುಚ್ಚ ಹೋದರಲ್ಲಿ ಭಾರೀ ಮಿಂಚು!!
ಅಪ್ಪನ ಸಿಟ್ಟು ಫಲಿಸಿತು,
ಅಮ್ಮಳ ಅಂದಾಜು ತಪ್ಪಲಿಲ್ಲ
ಕಿಂಚಿಷ್ಟೂ ಜರುಗಿಸದಂತೆ
ಸೋರಿದವೆಲ್ಲವೂ ಸೀದ ಪಾತ್ರೆಯೊಳಗೆ;
ಅಪ್ಪನ ಹಸ್ತ ಈಗ ನಗುತಿದೆ,
ಪಠ್ಯ ಚೀಲಕ್ಕೆ ಬಿಡುವು!!
ತಣಿವು ತಟ್ಟಿದ ಗೋಡೆ
ಚಳಿಗೆ ನಡುಗುತಿದೆ,
ಒಲೆಯ ಮೇಗಡೆ ಬೆಂದ ಗಂಜಿ,
ಹಸಿದ ಹೊಟ್ಟೆ,
ಸ್ವಾಭಿಮಾನ ಬಿಡದೆ
ಹಸಿದಲ್ಲೇ ಉಳಿದ ಚಂದ್ರ!!
-- ರತ್ನಸುತ
No comments:
Post a Comment