ದೂಡುತಿದೆ ನನ್ನ
ದಡದಿಂದ ದಡಕೆ
ಸಂಕುಚಿತ ಭಾವಗಳು
ಬಿಡುವಿಲ್ಲದಂತೆ;
ನನಗೋ ಒಡೆದು
ಒಂದಾಗೋ ಮನಸು,
ನೀರಲೆಯ ಮೇಲೆ
ನೊರೆ ಗುಳ್ಳೆಯಂತೆ!!
ಎಲ್ಲೋ ಜನಿಸಿ
ಎಲ್ಲೋ ಹರಿದು
ಕಡಲ ಸೇರುವಾಸೆ
ಸಂಪನ್ನವಾಯಿತು;
ಬೆರಳಿಗೂ ಒಂದು
ಉಗುರಿನಷ್ಟರ ಅಡ್ಡಿ
ಬೆರೆತ ಒಡಲಲ್ಲೂ
ಆಂತರಿಕ ಅಂತರ!!
ಕಪ್ಪೆ ಚಿಪ್ಪುಗಳೊಡನೆ
ತಳದಲ್ಲಿ ತಳಮಳಿಸಿ
ಜರಡಿ ಹಿಡಿದ ಬೆಳಕಿಗೆ
ಪಳಗಿದ ಒಡಲು;
ಪ್ರವಾಹದ ಸುಳಿಗೆ ಸಿಲುಕಿ
ನಿಸ್ಸಹಾಯಕನಂತೆ
ಮರಳ ದಂಡೆಯ ಮೇಲೆ
ತಟಸ್ಥನಾಗುತ್ತೇನೆ!!
ಗಾಳಿಗೆ ಹಾರಿ
ಮಳೆಯಲ್ಲಿ ತೋಯ್ದು
ಬಿಸಿಲಿಗೆ ಕಮರಿ
ಇರುಳನ್ನು ಹೊದ್ದು
ಯಾರದ್ದೋ ಅಸ್ಪಷ್ಟ
ಸ್ಪರ್ಶಕ್ಕೆ ಹಿಗ್ಗಿ
ಮತ್ತೆ ಅನಾಥನನಿಸುವಾಗ
ಅಲೆಗಳ ಸಾಂತ್ವನ!!
ಯಾರಿಗೂ ಬೇಡದ
ಎಳೆಸಾದ ಮುತ್ತು-
ಮತ್ತು ನಾನು;
ಒಂದೇ ಚಿಪ್ಪಲ್ಲಿ
ಒಪ್ಪವಾಗಿದ್ದದ್ದು
ನೆನಪಿನ ಪುಟವಷ್ಟೇ;
ಅದ ಹೊರಳಿಸಿದ್ದೂ
ಹಳೆ ನೆನಪು!!
ಓರೆ, ಕೋರೆಗಳು ನವಿರಾಗಿ
ಸಿಕ್ಕ-ಸಿಕ್ಕ ಹರಿವಿಗೆ ಸಿಕ್ಕಿ
ಉರುಟುಗಲ್ಲಾದವನು
ಕೊನೆಗೊಮ್ಮೆ
ಎಲ್ಲೋ ಬಿಕರಿಯಾಗಿ
ಯಾವುದೋ ಮನೆಯ
ಗಾಜಿನ ಪಂಜರದಿಂದ
ಪ್ರಪಂಚವ ಕಾಣುತ್ತಿದ್ದೇನೆ,
ಯಾರನ್ನೂ ದೂರದಂತೆ!!
-- ರತ್ನಸುತ
ದಡದಿಂದ ದಡಕೆ
ಸಂಕುಚಿತ ಭಾವಗಳು
ಬಿಡುವಿಲ್ಲದಂತೆ;
ನನಗೋ ಒಡೆದು
ಒಂದಾಗೋ ಮನಸು,
ನೀರಲೆಯ ಮೇಲೆ
ನೊರೆ ಗುಳ್ಳೆಯಂತೆ!!
ಎಲ್ಲೋ ಜನಿಸಿ
ಎಲ್ಲೋ ಹರಿದು
ಕಡಲ ಸೇರುವಾಸೆ
ಸಂಪನ್ನವಾಯಿತು;
ಬೆರಳಿಗೂ ಒಂದು
ಉಗುರಿನಷ್ಟರ ಅಡ್ಡಿ
ಬೆರೆತ ಒಡಲಲ್ಲೂ
ಆಂತರಿಕ ಅಂತರ!!
ಕಪ್ಪೆ ಚಿಪ್ಪುಗಳೊಡನೆ
ತಳದಲ್ಲಿ ತಳಮಳಿಸಿ
ಜರಡಿ ಹಿಡಿದ ಬೆಳಕಿಗೆ
ಪಳಗಿದ ಒಡಲು;
ಪ್ರವಾಹದ ಸುಳಿಗೆ ಸಿಲುಕಿ
ನಿಸ್ಸಹಾಯಕನಂತೆ
ಮರಳ ದಂಡೆಯ ಮೇಲೆ
ತಟಸ್ಥನಾಗುತ್ತೇನೆ!!
ಗಾಳಿಗೆ ಹಾರಿ
ಮಳೆಯಲ್ಲಿ ತೋಯ್ದು
ಬಿಸಿಲಿಗೆ ಕಮರಿ
ಇರುಳನ್ನು ಹೊದ್ದು
ಯಾರದ್ದೋ ಅಸ್ಪಷ್ಟ
ಸ್ಪರ್ಶಕ್ಕೆ ಹಿಗ್ಗಿ
ಮತ್ತೆ ಅನಾಥನನಿಸುವಾಗ
ಅಲೆಗಳ ಸಾಂತ್ವನ!!
ಯಾರಿಗೂ ಬೇಡದ
ಎಳೆಸಾದ ಮುತ್ತು-
ಮತ್ತು ನಾನು;
ಒಂದೇ ಚಿಪ್ಪಲ್ಲಿ
ಒಪ್ಪವಾಗಿದ್ದದ್ದು
ನೆನಪಿನ ಪುಟವಷ್ಟೇ;
ಅದ ಹೊರಳಿಸಿದ್ದೂ
ಹಳೆ ನೆನಪು!!
ಓರೆ, ಕೋರೆಗಳು ನವಿರಾಗಿ
ಸಿಕ್ಕ-ಸಿಕ್ಕ ಹರಿವಿಗೆ ಸಿಕ್ಕಿ
ಉರುಟುಗಲ್ಲಾದವನು
ಕೊನೆಗೊಮ್ಮೆ
ಎಲ್ಲೋ ಬಿಕರಿಯಾಗಿ
ಯಾವುದೋ ಮನೆಯ
ಗಾಜಿನ ಪಂಜರದಿಂದ
ಪ್ರಪಂಚವ ಕಾಣುತ್ತಿದ್ದೇನೆ,
ಯಾರನ್ನೂ ದೂರದಂತೆ!!
-- ರತ್ನಸುತ
No comments:
Post a Comment