Tuesday, 10 June 2014

ರುಪಾಯ್ಗಿಲ್ಲ ಮೂರ್ಕಾಸಿನ್ ಬೆಲೆ

ಅದಪ್ಪ ದಿನ್ಗೊಳಂದ್ರೆ, ರುಪಾಯಿ ಜೇಬಲ್ಲಿದ್ರೆ ಇಡಿ ಅಂಗ್ಡಿನೇ ಕೊಂಡ್ಕೋಬೋದು ಅನ್ನೋ ಲೆಕ್ಕಚಾರ; ನಿಂಬೆಹುಳಿ, ಶುಂಟಿ ಪೆಪ್ಪರ್ಮಿಂಟು ಬೋಟಿ, ಚಕ್ಲಿ ಅಂಡ್ ಸೋ ಆನ್...
ವಿಷ್ಯ ಅದಲ್ಲ; ಇಷ್ಟೆಲ್ಲ ತಗೊಂಡ್ರೂ ಮಿಕ್ಕೋ ಚಿಲ್ರೆಗೆ ಜಾಗ ಸಾಲ್ದೆ ತಿಂಡಿ ಇಟ್ಟಿದ್ ಜೇಬ್ಗೇ ತುರ್ಕಿದ್ದೆ;

ನಡ್ದಾಡೋವಾಗ ಅಲ್ಮುನಿಯಂ ಚಿಲ್ರೆ ಸದ್ದು ಹಾರ್ಮೋನಿಯಂ ಸದ್ದಂಗೆ ಏನ್ ಖುಷಿ ಕೊಡೋದು ಅಂತೀರಿ?!!
ಅವಾಗೆಲ್ಲ ರುಪಾಯಿ ಬಿಲ್ಲೆ ಗಾತ್ರ ಕಣ್ಮುಂದಿಟ್ ನೋಡಿದ್ರೆ ಆಕಾಶಾನೇ ಕಾಣ್ತಿರ್ಲಿಲ್ಲ;
ಇವಾಗ್ನೋಡಿ, ನಾಕಾಣಿಯಷ್ಟೇ ಪುಟ್ಪುಟಾಣಿ ಬಿಲ್ಲೆಗ್ಳು!!

ಮೊನ್ನೆ ಅಂಗ್ಡಿಲಿ ಒಂದ್ರುಪಾಯಿ ಚಿಲ್ರೆ ಇಲ್ಲ ಅಂತ ಹಾಳಾಗೋಗ್ಲಿ ಅಂತ ಹಂಗೇ ಬಿಟ್ಟೆ; ಹಿಂದೆ ಬಿಡೇವಾ? ಜಗ್ಳ ಮಾಡಿ ಈಸ್ಕಳೆವೆ!!

ಈಗಿನ್ ಕಲುದ್ ಮಕ್ಳು ಒಂದ್ರುಪಾಯ್ ಬೆಲೆ ಚಾಕ್ಲೇಟ್ನ ಬಾಯ್ಗೂ ಇಡ್ದಂಗ್ ತಯಾರಾಗವೆ!!
ಏನೇ ಆಗ್ಲಿ; ಎರ್ಡು, ಐದು, ಹತ್ರುಪಾಯ್ ಬೆಲ್ಲೆಗ್ಳು ಇಷ್ಟ್ರಲ್ಲೇ ಕಲಿಯೋ ಪಾಠ ಈ ಬಡ್ಪಾಯಿ ಅನ್ಬೋಸ್ ಬಿಟ್ಟೌನೆ;
"ಜೇಬಾಗಿದ್ರೂ ಕಾಣ್ದಂಗ್ ಬಿದ್ದಿರೋ
ರುಪಾಯಿ ಬಿಲ್ಲೆ,
ದ್ಯಾವ್ರಿಗೂ ಬ್ಯಾಡ್ವಾದ್ಯಲ್ಲೋ ಪಾಪಿಷ್ಟ?!!"

                                                                    -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...