ನಿನ್ನ ಸುತ್ತ ಹೂವ ತೋಟ ನಾನೇ ಹೆಚ್ಚು ರಂಗು ಪಡೆವೆ
ನಿನ್ನಲೊಂದು ಚಂದ ಪದ್ಯ ಅಡಗಿದಂತೆ ಓದುವಾಗ
ನಿನ್ನ ಬೆರೆತು ನನ್ನ ಮರೆತು ಈ ಕುರಿತು ಬರೆಯಲಿರುವೆ
ನನ್ನ
ನಿನ್ನ ಹೆಸರ ಪ್ರಾಸಬದ್ಧ ಅರ್ಥ ಕೂಡಿಸಿ
ಬತ್ತಿ ಹೋದ ಶಬ್ದಕೋಶವನ್ನು ಒಮ್ಮೆ ಜಾಲಿಸಿ
ಗೀಚಿ, ಒಡೆದು, ಬರೆದು, ಹರಿದು ಉಂಡೆ ಮಾಡಿ ಎಸೆಯುವೆ
ಬಾಗಿಲಿಂದ ಇಣುಕುವಂತೆ ನಿನ್ನ ಗಮನ ಸೆಳೆಯುವೆ
ನಿನ್ನ ಮನೆಯ ಅಂಗಳದ ತೊಟ್ಟಿಯಲ್ಲಿ ಒಮ್ಮೆ ನಾ
ಚಂದ್ರ ಬಿಂಬವಾಗಿ ನಿನ್ನ ಮೊಗವ ಕಾಣ ಬಂದೆನು
ಹೇಗೋ ಬಂದೇನಲ್ಲ ಕೋಣೆ ತುಂಬ ಚೆಲ್ಲಿಕೊಂಡೆನು
ಅಲ್ಲೂ ನಿನ್ನ ಕಾಣದಾಗಿ ಪೆಚ್ಚು ಮೋರೆ ಹೊತ್ತೆನು
ಬಿಂಬವ ಬದಿಗೊತ್ತಿ ಬಾನೆಡೆಗೆ ನೋಟ ಹಚ್ಚುತ
ಉಪ್ಪರಿಗೆ ಮೇಲೆ ಕೂತು ನೋಡುತಿದ್ದೆ ನನ್ನನೇ
ಎಂಥ ಪೆದ್ದ ನಾನು ಅಕ್ಕ ಪಕ್ಕ ಉಳಿದ ಚುಕ್ಕಿಗೆ
ನಿನ್ನ ಕಣ್ಣ ಮಿಂಚ ತೋರಿ ಮಾಡುತಿದ್ದೆ ವರ್ಣನೆ
ಪೂರ್ತಿಯಲ್ಲ ಜೀವನ ನೀ ಪೂರ್ತಿ ಮಾಡದೆ
ಖಾಲಿಯಾಗೇ ಉಳಿಯುವೆ ನಿನ್ನ ಭರ್ತಿ ಇಲ್ಲದೆ
ನೂರಾರು ಕಣ್ಣಿನ ನವಿಲ ಮೈಯ್ಯಿ ನನ್ನದು
ಚೂರಾಗಿ ಹೋದವು ಕನಸು ನೀನು ಬಾರದೆ
No comments:
Post a Comment