ಪೆದ್ಪೆದ್ದಂಗೆ ಪ್ರಶ್ನೆ ಕೇಳು ಉತ್ರ ಕೊಡ್ತೀನಿ
ಇದ್ಕಿದ್ದಂಗೆ ಕೋಪ ಮಾಡ್ಕೋ ತಪ್ಪಾಯ್ತಂತೀನಿ
ಪತ್ರ-ಗಿತ್ರ ಬರ್ಯೋದಿಲ್ಲ ಮನಗೇ ಬರ್ತೀನಿ
ಏನೇ ಇದ್ರೂ ಮೂಗಿನ್ ನೇರ ಮಾತಾಡ್ಬಿಡ್ತೀನಿ
ಸ್ವಲ್ಪ ಸ್ವೀಟು, ಸ್ವಲ್ಪ ಘಾಟು,
ತಡ್ಕೋ ಬೇಕು ನನ್ನನ್ನ
ಅಟ್ಟಿಟ್ಯೂಡಿನಲ್ಲಿ ತೂಕ ಜಾಸ್ತಿ ಚೂರು ಜೋಪಾನ
ಪ್ರೀತಿ ಮಾಡೋ ವಯ್ಸಿನಲ್ಲಿ ಪ್ರೀತಿ ಮಾತ್ರ ಮಾಡೋಣ...
ಏನೋ ಚೂರು ಸಲುಗೆ, ಕೊಟ್ಟೆ ನೀನು ನನಗೆ
ಅಪ್ಪಿ ತಪ್ಪಿ ಪೋಲಿ ಆದ್ರೆ ಹಾಕು ಕಡಿವಾಣ
ಬಿಟ್ಟುಕೊಂಡು ಇರುವೆ, ಕೆರೆದುಕೊಳ್ಳದಿರುವೆ
ಹತ್ರ ಕೂತು ಮಾತಾಡೋಕೆ ನಿಂಗೂ ಕಷ್ಟಾನಾ?
ಹಗಲೊತ್ತಲ್ಲಿ ಕನಸು ಬೀಳೋ ಚಾನ್ಸು ತುಂಬಾ ಕಮ್ಮಿನೇ
ಹಂಗೂ ಬಿದ್ರೆ
ಕಾಣೋ ಆಸೆ
ಅಲ್ಲೂ ಕೂಡ ನಿನ್ನನ್ನೇ
ನನ್ನ ನಿನ್ನ ಕೇರ್ ಆಫ್ ಅಡ್ರೆಸ್ ಒಂದೇ ಅನ್ನೋಣ
ಪ್ರೀತಿ ಮಾಡೋ ವಯ್ಸಿನಲ್ಲಿ ಪ್ರೀತಿ
ಮಾತ್ರ ಮಾಡೋಣ...
ಹಿಂದೆ ಬಿದ್ದು ಅಲೆದು, ಕಲ್ಲು ಮುಳ್ಳು ತುಳಿದು
ಬಿಟ್ಟು ಬಾಳೋಕಾಗೋದಿಲ್ಲ ಅಂತ ಹೇಳೋದು
ಊಟ ನಿದ್ದೆ ಮರೆತು, ಮೆದುಳು ಪೂರ್ತಿ ಕೊಳೆತು
ಹುಚ್ಚ ಆದ ಮೇಲೆ ಯಾಕೆ ನೀವು ಒಪ್ಪೋದು
ಏನೂ ಇಲ್ಲ ನಾವು ಫ್ರೆಂಡ್ಸು ಅಂತ ಸುಳ್ಳು ಹೇಳೋದಾ
ಇಲ್ಲ ಇಲ್ಲ ಅಂತ ಎಲ್ಲ ಲವ್ವು ಸ್ಟಾರ್ಟು ಆಗೋದಾ
ಎಲ್ಲ ಗೊತ್ತಿದ್ದೂ ಏನೂ ಗೊತ್ತಿಲ್ದಂಗಿರೋಣ
ಪ್ರೀತಿ ಮಾಡೋ ವಯ್ಸಿನಲ್ಲಿ ಪ್ರೀತಿ
ಮಾತ್ರ ಮಾಡೋಣ...
No comments:
Post a Comment