ಹೂ ತಂದು ಮುಡಿಸಿ ಬಾಡುವುದೇತಕೆ, ತಾನಿರುವಲ್ಲಿಗೇ ಹೋಗೋಣ ಬಾ
ಕಂಡ ಕಂಡವರು ಏನೆಂದಾರು ಅನ್ನದಿರು, ಕೈ ಹಿಡಿದು ಜೊತೆಯಾಗೇ ಹೋಗೋಣ ಬಾ
ಎಲ್ಲೆಲ್ಲೂ ನಗೆ ಹಸಿದ, ಬೊಗಸೆ ಹಿಡಿದ ಮನಸುಗಳೇ
ನಮ್ಮಿಂದ ಹೊಮ್ಮುವ ಖುಷಿಗಳ ಪಸರಿ, ನೀಗಿಸಿ ಬರಲು ಹೋಗೋಣ ಬಾ
ಗಾಳಿ ಮಾತುಗಳಿಗೇನು ಪಡೆಯುತ್ತವೆ ಬೇಕಾದ ರೂಪ
ನಾವು ಹತ್ತಿಸಿದ ಹಣತೆ ಮುಖ್ಯ ನಮಗೆ, ಕಾಪಿಡಲು ಹೋಗೋಣ ಬಾ
ಸಾವು ನೋವುಗಳಾಚೆ ಬದುಕು ನಿರಂತರ ಸಾಗುವುದು
ಪೂರ್ತಿ ಬದುಕ ಬದುಕಿ ತೋರಿಸಲು ಹೋಗೋಣ ಬಾ
ಕೇಳುವುದಾವುದನ್ನೂ ಇಲ್ಲವೆನ್ನುವ ಬಡವನಲ್ಲ, ಆಜನ್ಮ
ಈ ಜಾಗ ನಮಗೆ ಸೂಕ್ತವಲ್ಲ, ಅನಂತಾನಂತ ಹೋಗೋಣ ಬಾ
No comments:
Post a Comment