ಓ ಚೆಲುವೆ, ನನ್ನ ಒಲವೇ
ನೀ ಮಾಡುವುದು ಸರಿಯೇ
ಕಾಯಿಸುತ ಈ ಕಣ್ಣುಗಳ
ನೀ ಕಡದಿರುವೆ ಬಿಡದೆ
ನುಣುಪಾಗಿರುವ ನಿನ್ನ ಪಾದವನು
ನನ್ನ ಕೆನ್ನೆಗೆ ಒರಗಿಸಲೇ?
ಕಾರಿರುಳು ಕವಿದಾಗಿರಲು
ನಿನ್ನ ಕಾಂತಿಗೆ ಮೊರೆಯಿಡುವೆ
ಒಳಬಾರದೆಲೆ ಹೊರ ನಿಲ್ಲುವುದೇ
ಮನದ ಕದವ ತೆರೆಯೇ
ಭೂರಮೆಯೇ ನೀ ಕಾಮನೆಯ
ಬಡಿದೆಚ್ಚರಿಸೋ ಭರಕೆ
ಅಬ್ಬರದ ಆಚರಣೆಯನು
ಅನುಭವಿಸುವೆ ಒಳಗೊಳಗೇ
ಸ್ವಾಗತಿಸೆ ನನ್ನ ಬಯಕೆ
ನೂರಾರಿವ
ಬೀಳ್ಗೊಡಲು ಬೆಳ್ಮುಗಿಲು
No comments:
Post a Comment