Monday, 24 November 2025

ಏನೋ ಹೇಳಲೆಂದೇ

ಏನೋ ಹೇಳಲೆಂದೇ

ಸಮೀಪ ಸಾರಿ ಬಂದೆ
ಗುಲಾಬಿಯೊಂದ ತಂದೆ
ನಿನಗಾಗಿಯೇ... ಸಾಗರಿಯೇ.. 

ನಿನ್ನಲ್ಲೇ ತಾಳಲು ಜೀವ
ನೂರಾರು ಮೂಡಿದ ಭಾವ
ಕಣ್ಣಿಂದ ಚಿಗುರಾದ ಪ್ರೇಮ
ಮನದಲ್ಲಿ ಬೇರು ಬಿಟ್ಟಿದೆ
ನೀನು ಸಿಕ್ಕಾಗ ಆಕಶ ರಂಗೇರಿದ ಹಾಗಿದೆ.. ಸಾಗರಿಯೇ...

ಹೀಗೆಲ್ಲ ಆಗಿರೋವಾಗ
ಏಕಾಂತ ಏತಕೆ ಈಗ
ಬಾ ಬೇಗ ಪರಿಹಾರ ನೀಡು
ತೋಳಿಂದ ಬಾಚಿ ತಬ್ಬುತಾ
ಹಾರೋ ಆಸೆಗ ರೆಕ್ಕೆಯ ಕಟ್ಟೋಳು ನೀನಲ್ಲವೇ... ಸಾಗರಿಯೇ...

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...