Monday, 24 November 2025

ಎದೆಗೊರಗಿ, ಮುಖ ಮರೆಸಿ

ಎದೆಗೊರಗಿ, ಮುಖ ಮರೆಸಿ 

ತುಟಿ ಅರಳಿ, ನಗುವುಣಿಸಿ
ಉಸಿರಾಟದೆರಿಳಿತ ಕಳಿಸು 
ಮೊದಮೊದಲ ಸೆಳೆತವಿದು 
ಹೊಸ ಥರದ ಮಿಡಿತವಿದು 
ಮಾತಿನಲಿ ಮಾತೊಂದ ಬೆಸೆಸು 

ನಡುರಾತ್ರೆಯಲಿ ಬಂದ 
ಸಿಹಿ ಪೋಲಿ ಕನಸೊಂದ 
ಕ್ಷಣದಲ್ಲೇ ಹೇಳುವೆನು ತಾಳು 
ಕಣ್ಣೇನೋ ಮಾತಲ್ಲದ 
ಮಾತು ಕಲಿತಾಯ್ತು 
ನೀನದರ ಮೌನವನೂ ಕೇಳು

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...