Monday, 24 November 2025

ನಿನದೇ, ಒಲವೇ

ನಿನದೇ, ಒಲವೇ 

ನನ್ನ ಪ್ರತಿಯೊಂದು ಎದೆ ಬಡಿತವು 
ನಿನದೇ, ಒಲವೇ 
ಆಡೋ ಉಸಿರಾಟದೇರಿಳಿತವು 
ಬಾಳು ನಿನ್ನದೇ ಈಗ
ಆದೆ ನೀ ಭಾಗ
ನನ್ನ ಜೀವದೊಳಗೆ
ಕಾಡೋ ಏಕಾಂತವ ಕೊಲ್ಲೋ
ಪರಿಹಾರ ನಿನ್ನಲ್ಲಿದೆ..

ಅಪ್ಪಳಿಸು ಓ
ನನ್ನ ಎದೆಯ
ನಿನ್ನ ದಡವಾಗಿಸಿ
ಕಂಗೊಳಿಸು ಓ
ಮಾತೇ ಬರದ
ಮೂಕನನ್ನಾಗಿಸಿ 
ಒಪ್ಪುವೆನು ತಲೆ ಬಾಗುತ 
ತಪ್ಪಾದರೂ ಸಮ್ಮತಿಸಿ
ನಿನ್ನ ಗುಣಗಾನ ಮಾಡೋಕೆ
ಭರಪೂರ ಹಾಡೊಂದಿದೆ

ಎಲ್ಲಿದ್ದರೂ ಓ
ನಿನ್ನೆದುರೇ
ಇರುವ ಹಾಗಾಗಿದೆ
ಸಾವಲ್ಲಿಯೂ ಓ
ಕೈಯ್ಯ ಹಿಡಿದು
ಜೊತೆಗೆ ನಿಲ್ಲೋಕಿದೆ
ನಿನ್ನುತ್ತರ ಏನಿದ್ದರೂ
ನನ್ನಿಷ್ಟಕೆ ಭಾವಿಸುವೆ 
ಪ್ರತಿ ಕೊನೆಯಲ್ಲೂ
ಆನಂದದಾರಂಭ ಕಲಿಸುವೆ.. 

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...