ಅವಳಿರದೆ..
ಮುರಿದ ಹಡಗು ಬದುಕು
ಹರಿದ ಕಥೆಯೇ ಬದುಕು
ಹೇಳಲು ಆಗದ ಸಾವಿರ ಮಾತಿಗೆ
ಅಂತ್ಯವೇ ಕಾಣದ ನೋವಿನ ಯಾತ್ರೆಗೆ
ಜಾರಿದ ಕಂಬನಿ ಹಾಡುವ ಧಾಟಿಗೆ
ಯಾರೋ ಬರೆದು, ಯಾರೋ ಅಳಿಸೋ
ಹಣೆಯ ಬರಹನೇ ಇದು..ಹಮ್...
ಅವಳಿರದೆ..
ಅವಳಿರದೆ.. ಬರಿದಾಗಿರುವೆ.. ಅವಳಿರದೆ..
ಹೇಗಾದರೂ ನನ್ನ ನೀ ಉಳಿಸು
ಉಳಿಗಾಲವಿನ್ನೂ ತುಸುವೇ
ಕಾರಣ ನೀಡದೆ, ಕಾರಣ ಕೇಳದೆ
ನೀನೇ ಬೇಕು ಎಂದಿದೆ ಗುಂಡಿಗೆ
ಉತ್ತರ ಸಿಕ್ಕರೆ ಪ್ರೀತಿ ಪ್ರಶ್ನೆಗೆ
ನೆತ್ತರ ಸಾಲಲಿ ಗೀಚುವೆ ಉತ್ತರ
ಮುಳ್ಳಿಗೂ ತಾಕಲಿ ಪ್ರೇಮದ ಮತ್ಸರ
ಆದರೂ ಇಲ್ಲವೇ ನೋವಿನ ಇಂಚರ
ನೀ ನೀಡದೆ ತಾ ಮನದೆ..
No comments:
Post a Comment