ಎಲ್ಲೇ ಕಳೆದರೂ ಪತ್ತೆ ಹಚ್ಚುವೆ
ನೆನೆಪೇ ನೀನು ಯಾರು?
ನೂರು ಬಣ್ಣದ ಪರಿಚಯವಾದ
ನೀ ತೋರಿದ ಮಳೆಬಿಲ್ಲು
ನಿನ್ನ ಮುರಿದ ಗಾಜಿನ ಬಳೆಯು
ಚುಚ್ಚಿದೆ ಎದೆಯನು ನೋಡು
ನನಗೂ ಅಷ್ಟು ಹಿಡಿಸದು ನೀನು
ಮೆಚ್ಚದ ನನ್ನ ಹಾಡು
ಗೆಜ್ಜೆ ತೊಡಿಸುವ ನೆಪದಲ್ಲಾದರೂ
ಕಾಲನು ಹಿಡಿಯುವೆ ಕ್ಷಮೆಗೆ
ಆದರೆ ಕ್ಷಮಿಸು ನನ್ನನು ಸಹಿಸು
ಇಲ್ಲವೇ ಸಾವನು ನೀಡು
No comments:
Post a Comment