ಮೊದಲೇ ಸಿಗಬಾರದೇ?
ಹೃದಯ ಕಾದಿರಿಸಿರುವೆ ನೋಡು
ಸ್ವೀಕರಿಸಬಾರದೆ?
ಬದುಕಿನ ಬಂಧನ ಬಿಡಿಸಲು
ಮೊದಲೇ ಸಿಗಬಾರದೇ?
ಹಾತೊರೆದ ಹಂಬಲಕೆ
ಭರವಸೆಯ ನೀಡಿದೆ ನೀ
ಆಲಿಸೆಯಾ ಎದೆಗೊರಗಿ
ಉಲಿದಿರಲು ಒಲವ ದನಿ
ನೀರಾಗಿ ಎರಗಿ ನಿನ್ನ ಪಾದ ಸೋಕಲೇ?
ಹೂವಾಗಿ ಅರಳಿ ನಿನ್ನ ಜೊತೆಗೆ ಹರಿಯಲೇ?
ಜೋರಾಗಿ ಒಮ್ಮೆ ನಿನ್ನ ಹೆಸರ ಕೂಗಲೇ?
ನೀ ಕೂಗೋ ಮೊದಲೇ ಹಾಜರಾತಿ ನೀಡಲೇ?
ಹೇಳುವೆ ಆಸೆಯನು ತಾಳು
ಯಾರಿಗೂ ಕೇಳಿಸದೆ ಹೇಳು
ಆತ್ಮಕೆ ರಸವಶ, ಆ ಅನುಭವ
ಆವರಿಸಲಿ ಹೀಗೆ…
(ಮೂಡಲಿ ನವರಸ, ಆ ರಸವಶ
ಆವರಿಸಲಿ ಹೀಗೇ…)
No comments:
Post a Comment