ತಂಟೆ ಮಾಡದಂತೆ
ನಿನ್ನ ಹಿಂದೆ ಸುಮ್ಮನೆ ಬಂದೆನೇ
ಗಾಳಿ ಬೀಸಿ, ಸೆರಗು ಹಾರಿ
ತಾನೇಗಿಯೇ ಸೋಕಲು..
ತುಂಟನಾದೆ... ತುಂಟನಾದೆ...
ನಡುವಿನಲ್ಲಿ ಜಾರಿದಂಥ
ಬೆವರ ಸಾಲು, ನೋಡುವಾಗ
ಸಾಲಾಗಿ ನಿಂತ ನೂರಾರು ಭಾವ
ಕಣ್ಣಿಂದ ಆಚೆ ತಾ ಹೊಮ್ಮುವಾಗ
ಜಾರಿ ಬೀಳೋ ಹಾಗೆ ನಾನಾದೆ
ಬೇರೇನೂ ತೋಚದೆ
ತುಂಟನಾದೆ... ತುಂಟನಾದೆ...
ತಿರುಗಿ ನೋಡು, ಒಮ್ಮೆ ನನ್ನ
ಆಗಬಹುದು ನಿನಗೂ ಹೀಗೇ
ಮೈ ಕಂಪನ ಈ ಹೊತ್ತಲ್ಲದೊತ್ತು
ಕಾಪಾಡಬೇಕು ಕೈಯ್ಯನ್ನು ಇತ್ತು
ಇನ್ನೂ ಚೂರು ಸನಿಹವಾದಂತೆ
ತುಟಿ ತಾಕುವಂತಿರೆ
ತುಂಟನಾದೆ... ತುಂಟನಾದೆ...
ಎಲ್ಲವನ್ನೂ ಕಲಿಸಿದಾಕೆ
ಕೊನೆಯ ಪಾಠ ಬಿಟ್ಟೆ ಏಕೆ?
ನಾ ಊಹೆಗೈದ ಶೃಂಗಾರವನ್ನು
ಗುಟ್ಟಾಗಿ ಬಂದು ನಾ ಹೇಳಲೆನು
ಎಲ್ಲವನೂ ಮೀರಿಸೋ ನಿನ್ನ
ಮುಕ್ತಾಯದೊಂದಿಗೆ
ತುಂಟನಾದೆ... ತುಂಟನಾದೆ...
No comments:
Post a Comment