Monday, 24 November 2025

ಮನಸಿನಲ್ಲಿ ಯಾವ ಯೋಚನೆ ಇಲ್ಲ

ಮನಸಿನಲ್ಲಿ ಯಾವ ಯೋಚನೆ ಇಲ್ಲ

ನೀನು ಬಿಟ್ಟು ಹೋದ ಸೂಚನೆ ಇಲ್ಲ
ಮುಂಚೆ ನಿನ್ನ ದಾರಿ ಎದುರು ನೋಡುತಾ ಇದ್ದೆ
ಈಗ ಕಾಯುವಂತ ಕೆಲ್ಸನೇ ಇಲ್ಲ

ಯಾವ ಪ್ರಶ್ನೆ ಇನ್ನು ಕಾಡೋದೇ ಇಲ್ಲ
ಯಾರಿಗಾಗಿ ಇನ್ನೂ ಬೇಡೋದೂ ಇಲ್ಲ 
ಗೆಲ್ಲ ಬೇಕು ಅನ್ನೋ ಯಾವ ಜಿದ್ದೂ ಇರದಾಗ
ನನ್ನ ಪಾಲಿಗೆ ಸೋಲೆಂಬುದೇ ಇಲ್ಲ

ಈಗ ಕಾಯುವಂತ ಕೆಲ್ಸನೇ ಇಲ್ಲ
ನನ್ನ ಪಾಲಿಗೆ ಸೋಲೆಂಬುದೇ ಇಲ್ಲ

ನಾನೆಲ್ಲಿಯೋ ಅಡ್ಡಾಡಲು
ನೀ ನೋಡಿ ಬಿಡಿಬಹುದೆಂಬ ಚಿಂತೆ ಇಲ್ಲವೆ
ನನ್ನಿಂದಲೇ ತಪ್ಪಾದರೂ
ಯಾರಲ್ಲೂ ಕ್ಷಮೆಯ ಕೇಳೊ ತಂಟೆ ಇಲ್ಲವೆ

ಕಾಲ ಓಡಿತೆಂಬ ಗೋಳಾಟವಿಲ್ಲ
ಬೀಳಬೋದು ಅನ್ನೋ ಆತಂಕವಿಲ್ಲ
ನನ್ನ ಪಾಡಿಗ್ ನಾನು ಇದ್ದರೂನೂ ಯಾರೂ ನನ್ನ
ಯಾಕೆ ಏನು ಅಂತ ಕೇಳೋದೇ ಇಲ್ಲ

ಮನ್ಸಿನಲ್ಲಿ ಯಾವ ಯೋಚನೆ ಇಲ್ಲ
ನೀನು ಬಿಟ್ಟು ಹೋದ ಸೂಚನೆ ಇಲ್ಲ
ಮುಂಚೆ ನಿನ್ನ ದಾರಿ ಎದುರು ನೋಡುತಾ ಇದ್ದೆ
ಈಗ ಕಾಯುವಂತ ಕೆಲ್ಸನೇ ಇಲ್ಲ

******
ನಿನ್ನ ಮರೆಯುವಂತ ಯೋಚ್ನೆನೇ ಇಲ್ಲ
ಯಾಕೆ ಅಂದ್ರೆ ನೆನಪಾಗೋದೇ ಇಲ್ಲ
ನೆನ್ನೆ ಏನು, ಈಗ ಏನು, ನಾಳೆ ಏನಂತ
ಸುಮ್ನೆ ಚಿಂತೆ ಮಾಡೋದ್ ಬೇಕಾಗೇ ಇಲ್ಲ


No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...