ಎಲ್ಲ ಇನ್ನೂ ಚಂದಾನೇ
ಕಾರಣ ನಿನ್ನಿಂದನೇ
ನಿನ್ನ ಕುರಿತು ವಿಚಾರ ಮಾಡಿ
ಮರೆತೇ ಬಿಡುವೆ ನನ್ನನ್ನೇ...
ಚೆಲುವೆ ನೀನು ಬಳಿಸಾರಲು
ಮನಸು ಉಕ್ಕಿ ಬಂದಿದೆ
ನಿನ್ನ ಕನಸೊಂದು ಸದಾ ಕಾಡಿ
ಸತಾಯಿಸಿದೆ
ನೀನು ಮುನಿಸಲ್ಲಿಯೂ ಅತಿಯಾದ
ಹಿತ ನೀಡಿರುವೆ
ನಿನ್ನ ಗುಣಗಾನ ಮಾಡುವಾಗಲೇಕೋ
ಸೋತಿರುವೆ
ಬಿಚ್ಚು ಮಾತ ಹೇಳಲು ತುಸುವೇ
ಸಿಗ್ಗು ಮೂಡಿದೆ
ನಿನ್ನ ಹೆಸರೊಂದಿಗೆ ನನ್ನ ಹೆಸರು
ಕೈಜೋಡಿಸಿದೆ
ಚೆಲುವೆ ನೀನು ಬಳಿಸಾರಲು
ಮನಸು ಉಕ್ಕಿ ಬಂದಿದೆ
ಸುಳಿದಾಡೋ ಪ್ರತಿ ಕುತೂಹಲದಿ
ಕಾಡಿ ಬಿಡು
ಗುಟ್ಟಾಗಿ ನನ್ನೆಲ್ಲ ಕವೆತೆಯ
ಓದಿಬಿಡು... ಚೆಲುವೆ!
No comments:
Post a Comment