ಏನೋ ಹೇಳ ಬಂದೆ ನೀನು
ಹೇಳಿ ಹೋಗು ಎಲ್ಲವನ್ನೂ
ನಿಂತ ಹಾಗೆ ಒಂದು ಮಾತು
ನಿನ್ನ ಬಳಿ ಇರಿಸು ಇನ್ನೂ
ಹುರುಪು ಸಿಕ್ಕ ಹಾಗಿದೆ
ಹೀಗೇ ಸತಾಯಿಸಿ ತಡ ಮಾಡೋ
ಹಠವಾದರೂ ಏಕಿದೆ?
ನಿನ್ನ ರೂಪಾಂತರಗೊಳ್ಳುವ ಕೋಪ
ನಾಟಿದೆ ಎದೆಗೆ
ಅದ ಗುಣಪಡಿಸುವ ಸರಳ ನಗೆಯ
ಮನೆಮದ್ದು ಬೇಕಿದೆ!
ಅದೊಂದೇ ಕಾರಣ ಕೊಟ್ಟು ಹೊರಟರೆ
ಜೀವಕೆ ತೃಪ್ತಿಯಿಲ್ಲ
ಹೊಸ ನೆಪಗಳ ರಾಶಿಯಿದೆ ನನ್ನ ಬಳಿ
ಬಳುವಳಿ ಕೊಡಬೇಕಿದೆ
ಚಿತ್ತು ಮಾಡಿ ಕೊಟ್ಟ ಪತ್ರಗಳಲ್ಲಿ
ಹುದುಗಿದ ಭಾವಗಳು
ಅಚ್ಚುಕಟ್ಟಾಗಿ ಬರೆದರೆ ದಕ್ಕಲಾರವು
ಈಗಲೇ ಗೀಚಬೇಕಿದೆ
ಕಲ್ಲು ಬೆಂಚಿಗೆ ಬೆನ್ನು ಕೊಟ್ಟು ಸಾಕಾಗಿದೆ
ಕಣ್ಣಿಗೆ ಕಣ್ಣು, ತುಟಿಗೆ ತುಟಿ
ಮನಸಿಗೆ ಮನಸು, ಜೀವಕೆ ಜೀವ
ಕೊಟ್ಟುಬಿಡಬೇಕಿದೆ
ಪ್ರೀತಿ ಕೊಟ್ಟುಬಿಡಬೇಕಿದೆ...
No comments:
Post a Comment