Monday, 24 November 2025

ನಿನ್ನ ಪ್ರೀತಿಗೆ ಸೋಲುವೆ ದಿನ

ನಿನ್ನ ಪ್ರೀತಿಗೆ ಸೋಲುವೆ ದಿನ

ನಿನ್ನ ಪ್ರೀತಿಗೆ ಸೋತಿದೆ ಮನ

ಪ್ರಾಮಾಣಿಕ ಪ್ರೇಮಿಗೆ ಪರೀಕ್ಷೆಯೇ
ಪಾರಾಗಲು ಪ್ರೀತಿ ಸೋತಂತೆಯೇ
ರೂಪಾಂತರ ಆಗುವ ಮೋಹವು
ನಾನಾ ಥರ ಕಾಡುವ ಭಾವನೆ
ಸೋಲಿನಲ್ಲೇ ಗೆಲ್ಲುವಂಥ ದಾರಿಯನ್ನು
ಕಾಣುವ ಸುಖ

ಆಟಿಕೆಯ ಹಾಗೆ ಚೂರಾದ ನಂತರ
ಗುಂಡಿಗೆಯ ಜೋಡಿಸೋಕೂ ಏಕೆ ಅಂತರ
ನನ್ನದೊಂದು ಪಾಲು ನಿನ್ನದಾಗಿ ಹೋಗಿದೆ
ನೀಡಿ ಹೋಗು ಇಲ್ಲವೇ ಅಪೂರ್ಣವಾಗುವೆ
ಕಣ್ಣ ಮುಂದೆ ಗೋಜಲಾದ ದಾರಿ ನೂರು
ನಿನ್ನ ಸೇರಲು..

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...