ಕೊಡು ಈ ಬಾಳಿಗೆ
ಬಾಕಿ ಉಳಿದಂಥ ಎಲ್ಲ ಖುಷಿ
ಇರು ಹೀಗೇ ಜೊತೆ
ನಾನು ಬರಬೇಕು ಹಿಂಬಾಲಿಸಿ
ತೊದಲು ಮಾತಲಿ
ಮೊದಲ ಕೋರಿಕೆ
ನುಡಿವ ಮುನ್ನವೇ ಆಲಿಸು
ಬರೆದು ನೋಡಲೇ
ಮರಳ ಮೇಲೆ ನಾ
ಅಲೆಗೂ ಮುನ್ನ ನೀ ಓದೆಯಾ
ಕರಗೋ ಮೋಡಕೆ
ಬಿಡುವು ಕೋರುವೆ
ಮುಳುಗೋ ಮುನ್ನವೇ ಸೇರೆಯಾ?
ಆಗದೇನು ಜೀವಕೆ ನೋವು
ಗಾಯ ಆಗಲು ಗಾಯಕೆ
ಎಲ್ಲವನ್ನೂ ಸಹಿಸಿಕೊಂಡಾಗ
ಅಳುವೂ ಹಾಕಿದೆ ಪೀಠಿಕೆ
ನಗುವ ಮಾತ್ರಕೆ ನಾ
ಹಗುರವಾದೆ ಅಂತಲಲ್ಲ
ಹೊರುವ ಭಾರವನ್ನು
ನಿನ್ನ ಮೇಲೆ ಹೊರಿಸಬೇಕಿಲ್ಲ
ಚಿಟಿಕೆ ಪ್ರೀತಿಯ
ಬಯಸೋ ಸಾಗರ
ಕುಸಿದ ಹಾಗೆ ನಾ ಆದೆನೇ..
ಬರೆದು ನೋಡಲೇ
ಮರಳ ಮೇಲೆ ನಾ
ಅಲೆಗೂ ಮುನ್ನ ನೀ ಓದೆಯಾ
ಕರಗೋ ಮೋಡಕೆ
ಬಿಡುವು ಕೋರುವೆ
ಮುಳುಗೋ ಮುನ್ನವೇ ಸೇರೆಯಾ?
ಹಾರಿ ಬಂತು ಬಣ್ಣದ ಚಿಟ್ಟೆ
ಹೆಗಲ ನೀಡುವ ಹಂಬಲ
ಮನಸಿಗೇನೂ ನೀಡಬೇಕಿಲ್ಲ
ಇರಲಿ ನಲ್ಮೆಯ ಬೆಂಬಲ
ನಿಂತು ಒಮ್ಮೆ ತಿರುಗಿ ನೋಡಬೇಕು
ಹಿಡಿದ ಜಾಡು
ಸವಿದ ಮೇಲೆ ಇನ್ನೂ ಹೆಚ್ಚು ಸವಿಯು
ಪ್ರೇಮದ ಹಾಡು
ಬಿರುಕು ಮೂಡಲು
ಬೆರೆತು ನೋಡುವ
ಮುಗಿದೇ ಹೋಗಲಿ ತಾಮಸ
ಬರೆದು ನೋಡಲೇ
ಮರಳ ಮೇಲೆ ನಾ
ಅಲೆಗೂ ಮುನ್ನ ನೀ ಓದೆಯಾ
ಕರಗೋ ಮೋಡಕೆ
ಬಿಡುವು ಕೋರುವೆ
ಮುಳುಗೋ ಮುನ್ನವೇ ಸೇರೆಯಾ?
No comments:
Post a Comment