ನಾ ನೋಡುತ ನಿನ್ನ ಹಾವ ಭಾವ
ತೇಲಾಡಿದೆ ನೋಡು ನನ್ನ ಜೀವ
ಒಲವೇ...
ನಾ ನೋಡುತ ನಿನ್ನ ಹಾವ ಭಾವ
ತೇಲಾಡಿದೆ ನೋಡು ನನ್ನ ಜೀವ
ಎಲ್ಲೆಲ್ಲಿಯೂ ನಿನ್ನ ಗಂಧ ಚೆಲ್ಲು
ಹಿಂಬಾಲಿಸಿ ಬರುವೆ ಚೂರು ನಿಲ್ಲು
ಎದೆಯಲ್ಲಿ ಬಿಡಿಸು ಮಳೆಯ ಬಿಲ್ಲು ಸಂಗಾತಿ
ಕರೆದರೆ ಸಾಕು ಕಣ್ಣಲಿ
ಬೇರೆತೇ ಹೋಗುವೆ ನಿನ್ನಲಿ
ಹೇಳೊ ಆಸೆ ಇನ್ನೂ ನೂರಾರು.. ಯೆ ಯೆ ಯೆ
ತಂಗಾಳಿ ಸೋಕಿದಂಥ
ಹೂವೊಂದು ನಾಚುವಂತೆ
ನೀ ಕಂಡೆ ಬಿಸಿಲ ನಡುವೆ
ಮುದ್ದಾಗಿ ಮಾತನಾಡು
ನಾ ಏನೂ ಕೇಳದಂತೆ
ತುಟಿಯನ್ನೇ ನೋಡಿ ನಲಿವೆ
ನುಣುಪಾದ ಕೈ ಬೆರಳ ಚಾಚಿ
ಮರೆಯಾಗು ಮನಸನ್ನು ದೋಚಿ.. ಓ..
ಇನ್ನಿಲ್ಲ ಬೇರೆ ಚಿಂತೆ
ನೀ ನನ್ನ ಜೊತೆಗೆ ನಿಂತೆ
ನಾ ಕಡಲು ನಿನ್ನ ಅಲೆಗೆ
ಅನುಭವಿಸಿ ಪ್ರೇಮವನ್ನು
ಅನುಗಾಲ ಪ್ರೇಮಿಯಾದ
ಗರಿ ಮೂಡೋ ಹಿಗ್ಗು ನಮಗೆ
ಪ್ರತಿಯೊಂದು ಕ್ಷಣವಿನ್ನೂ ಮೌಲ್ಯ
ದೂರಾಗೋದಂತೂ ಅಸಾಧ್ಯ.. ಓ..
No comments:
Post a Comment