ಒಮ್ಮೊಮ್ಮೆ ಗೆಲ್ಲುತ
ಒಮ್ಮೊಮ್ಮೆ ಸೋಲುತ
ಈ ಪ್ರೀತಿಲಿ ಬೀಳುವ.. ಈ ಪ್ರೀತಿಲಿ ಬೀಳುವ
ನಿನ್ನಲ್ಲಿ ನನ್ನನು
ನನ್ನಲ್ಲಿ ನಿನ್ನನು
ಕಂಡಾಕ್ಷಣ ಹೇಳುವ.. ಈ ಪ್ರೀತಿಲಿ ಬೀಳುವ
ನೀ ಮಾಡೋ ಗಾಯ
ಮಾಯೋಕೂ ಮುನ್ನ
ಬಾ ಮಾಡಿ ಹೋಗು
ಮತ್ತೊಂದು ಬೇಗ..
ಆಗಾಗ ಹೀಗೆಲ್ಲ
ಆಗೋದೇ ಅನ್ಯಾಯ
ಮುತ್ತಿಗೆ ಮುಂಚೆನೇ
ಮುಗಿಯೋದಾ ಅಧ್ಯಾಯ
ವಿಳಾಸನೇ ಇಲ್ಲ ಬರೋದೆಲ್ಲಿಗೆ?
ಸರಿ ದಾರಿ ಹೇಳು ನಿನ್ನ ಊರಿಗೆ
ಇರೋದೊಂದೇ ಹೃದಯ
ಕೊಡೋದೆಂದಿಗೆ?
ನಿಂತಲ್ಲೇ ತಲ್ಲಣ
ಆದಂತೆ ಉಲ್ಬಣ
ಕಣ್ಣೀರು ಕೆನ್ನೆಗೆ
ಕೊಟ್ಟೀತೇ ಸಾಂತ್ವನ
ಹುಷಾರಾಗಿ ಇದ್ದೂ ಕಾಲ್ಜಾರೋದಕೆ
ಅನುರಾಗವೆಂದು ಹೆಸರಿಟ್ಟಂತಿದೆ
ಇದು ಗೊತ್ತಾಗಿ ಕೂಡ
ಪ್ರೀತಿ ಮಾಡಿದೆ..
No comments:
Post a Comment