Monday, 24 November 2025

ನೀ ನೀಡುವ ನೋವಿದು ಅತೀವ

ನೀ ನೀಡುವ ನೋವಿದು ಅತೀವ

ನಿನ್ನೊವಲಿ ಎಲ್ಲಿದೆ  ಅಭಾವ
ಈ ಕಣ್ಣ ಹಸಿವ ಪೂರೈಸುವವಳೇ
ನಿನಗಾಗೇ ಮಿಡಿವುದು ಈ ಜೀವ

ನಗಲದುವೇ ಶುಭ ಮುಹೂರ್ತವೇ
ನೀನಿರದೆ ಏನಾದರೂ ವ್ಯರ್ಥವೇ
ನೀ ವಹಿಸೋ ಮೌನದದೆಷ್ಟೋ ಪದಗಳಿಗೆ
ನಿಘಂಟು ಅರಿಯದೊಳಾರ್ಥವೇ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...