ಆಕೆಗೆ ಹೇಳಿಬಿಡಿ
ಹಾಸಿಕೊಂಡ ನೆನಪಿನಲ್ಲಿ
ಅವಳ ನೆನಪೇ ಅಳಿಸಿದೆ
ತೋಯ್ದ ಕಣ್ಣಿನಲ್ಲಿ ತನ್ನ
ಎಲ್ಲ ಗುರುತು ಅಳಿಸಿದೆ
ಆಕೆಗೆ ಹೇಳಿಬಿಡಿ
ಒಂದು ಮಾತು ಹೆಚ್ಚು
ಆಡಿದಾಗಿಲಿಂದ ಹೀಗೆ
ಆಡದ ಮಾತುಗಳು
ಎತ್ತರದ ಶಿಖರಗಳು
ಜ್ವಾಲಾಮುಖಿಯು ಚಿಮ್ಮಿ
ಎದೆಯ ಅಚ್ಚೆ ಅಳಿಸಿದೆ
ಉಸಿರಿನ ಕುಸುರಿಗೆ
ಸೋತ ಮನಸು
ಕೊಸರುವುದು ಈಚೆಗೆ
ನಿಂತೇ ಬಿಡುವ ಶಂಕೆ
ಆದರೆ ಆಕೆ ಸ್ಖಲಿಸಿದ
ನಂಜು ಜೀವ ಉಳಿಸಿದೆ
ಅರಿಯದ ಪಾಠಗಳೆಷ್ಟೋ
ಹರಿದಿರೋ ಹಾಳೆಗಳೆಷ್ಟೋ
ಮುರಿದ ಬಳಪ
ಒಡೆದ ಹಲಗೆ
ಗೋಡೆ ತುಂಬ ಇದ್ದಿಲು
ಪ್ರೀತಿ ಸುಳ್ಳೆಂಬ
ಪಾಠ ಕಲಿಸಿದೆ
No comments:
Post a Comment