Tuesday, 30 June 2020

ಗಾ ಗರಿ ಗಾ ಗರಿ ಗಾರಿ ಗಾ ಮಗರಿ

ಗಾ ಗರಿ ಗಾ ಗರಿ ಗಾರಿ ಗಾ ಮಗರಿ 
ರೀ ರಿಸ ರೀ ರಿಸ ನೀ ಸನಿ 
ಗಾ ಗಾ ಗರಿ ಗಾ ಗರಿ ಗಮಪನಿ ದನಿ ದನಿ ದಪ ಮಗ ರೀ ಮಗ 
ಗಾ ಗರಿ ಗಾ ಗರಿ ಗಾರಿ ಗಾ ಮಗರಿ 
ರೀ ರಿಸ ರೀ ರಿಸ ನೀ ಸನಿ 
ಗಮ ಪನಿ ದನಿ ದನಿ ದನಿ ದಪಪಸ ಸಾ ಸನಿ ದಪ ಮಗ ರೀ ಮಗ 

ಏನಾದೆನು ನಾ ಈ ದಿನ 
ಹೊಸತನವೊಂದು ಮೈಗೂಡಿದೆ 
ಹೇಗಾದರೂ ಮಾತಾಡಿಸು 
ತುಟಿ ಅರಳೋಕೆ ಮನಸಾಗಿದೆ 
ಆಕಾಶದಿ ನಮ್ಮ ಚಿತ್ತಾರವ 
ಬರೆದಾತ ನೀನಲ್ಲವೇ?
ಈಗಲೇ ನೀಡು ಬಾ ಬಾಳಿಗೆ ಮುನ್ನುಡಿ 
ನನ್ನಲಿ ನಿನ್ನನು ತೋರುವ ಕನ್ನಡಿ 

ಈ ಚಂಚಲ ಕಣ್ಣಿನ ಹಂಬಲ 
ನೀನ್ನನ್ನು ಸೆರೆ ಮಾಡಲು 
ಓ... ಬಾ ರಂಜಿಸು ನನ್ನ ಏಕಾಂತದಿ 
ಇನ್ನಷ್ಟು ಒಲವಾಗಲು 
ಅಚ್ಚರಿ ಮೂಡಿಸು ಆಗಾಗ ಮಳೆಯಂತೆ 
ಎಚ್ಚರ ತಪ್ಪುವೆ ತೋಳಲ್ಲಿ ಮಗುವಂತೆ 
ಆಕಾಶದಿ ನಮ್ಮ ಚಿತ್ತಾರವ 
ಬರೆದಾತ ನೀನಲ್ಲವೇ?
ಈಗಲೇ ನೀಡು ಬಾ ಬಾಳಿಗೆ ಮುನ್ನುಡಿ 
ನನ್ನಲಿ ನಿನ್ನನು ತೋರುವ ಕನ್ನಡಿ 

ನೂರಾರಿವೆ ಹೇಳದ ಆಸೆಯು 
ಬಾ ಕೇಳು ಎದೆಗೊರಗುತ 
ಓ... ಆರಂಭವೇ ಇಷ್ಟು ರೋಮಾಂಚಕ 
ಒಲವಿನ್ನು ಸನ್ನಿಹಿತ 
ಅಕ್ಕರೆ ಉಕ್ಕಿತು ನಿನ್ನನ್ನು ಕಂಡಾಗ 
ಎಲ್ಲಕೂ ಉತ್ತರ ನೀಡುವೆ ಯಾವಾಗ 
ಹೂ ಸಂತೆಯ ನಡುವೆ ಎದುರಾಗುವ 
ಮಳೆಬಿಲ್ಲು ನೀನಲ್ಲವೇ?


ಈಗಲೇ ನೀಡು ಬಾ ಬಾಳಿಗೆ ಮುನ್ನುಡಿ 
ನನ್ನಲಿ ನಿನ್ನನು ತೋರುವ ಕನ್ನಡಿ... 

https://youtu.be/8WEbLFsry5k

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...