Tuesday, 30 June 2020

ಮಲ್ಲಿಗೆಯ ಹೂವ ಬಳ್ಳಿಯೇ

ಮಲ್ಲಿಗೆಯ ಹೂವ ಬಳ್ಳಿಯೇ
ನನ್ನ ಕದ್ದು ಹೋದ ಕಳ್ಳಿಯೇ
ಗಾಯವೊಂದ ಮಾಡಲಾರೆಯಾ ಗುಂಡಿಗೆಯಲಿ?
ಬೇಲಿ ದಾಟಿ ಬಂದ ಆಸೆಗೆ
ಕಾಲು ದಾರಿ ಬೇಕು ನಿನ್ನೆಡೆ
ಕೈಯ್ಯ ಚಾಚಿ ನಿಲ್ಲ ಬಲ್ಲೆಯಾ ನಾಚಿಕೆಯಲಿ?
ಕಾಡುವಂಥ ರೂಪಸಿಯೇ
ಬಾರೇ ನನ್ನ ಪೇಯಸಿಯೇ
ಮಾಯವಾದ ತಾಪಸಿಯೇ
ಮೋಡಿ ಮಾಡೋ ಮಾನಸಿಯೇ
ಅಂದವಾದ ರಾಕ್ಷಸಿಯೇ
ಜೀವ ನಾಡಿಯ ಕಸಿಯೇ
ಪ್ರೇಮ ಹಾಳೆಯ ಮಸಿಯೇ
ಸರಸಕೆ ಸಖಿ ಸಖಿ ಬಾ
ಹೊಸ ಒಗಟು ಬಿಡಿಸುವೆ ಸುಖಿ ಬಾ
ಇಗೋ ಕನಸುಗಳ ವಿಳಾಸ
ಜೊತೆ ಸಿಗಲು ಮನಸಿಗೆ ಉಲ್ಲಾಸ
ಇದೇ ಸವಿ ಸಮಯ ಅನ್ನೋದಾ
ಹೊಸ ಒಗಟು ಬಿಡಿಸುವೆ ಸುಖಿ ಬಾ
ಇಗೋ ಕನಸುಗಳ ವಿಳಾಸ
ಜೊತೆ ಸಿಗಲು ಮನಸಿಗೆ ಉಲ್ಲಾಸ
ಇದೇ ಸವಿ ಸಮಯ ...

ಮಲ್ಲಿಗೆಯ ಹೂವ ಬಳ್ಳಿಯೇ
ನನ್ನ ಕದ್ದು ಹೋದ ಕಳ್ಳಿಯೇ
ಗಾಯವೊಂದ ಮಾಡಲಾರೆಯಾ ಗುಂಡಿಗೆಯಲಿ?
ಬೇಲಿ ದಾಟಿ ಬಂದ ಆಸೆಗೆ
ಕಾಲು ದಾರಿ ಬೇಕು ನಿನ್ನೆಡೆ
ಕೈಯ್ಯ ಚಾಚಿ ನಿಲ್ಲ ಬಲ್ಲೆಯಾ ನಾಚಿಕೆಯಲಿ?


ಗಂಧ-ಗಾಳಿ, ಹುಣ್ಣಿಮೆಯಲ್ಲಿ
ಬಾರದೆ ಉಳಿಯ ಬೇಡ ನೀ ದೂರಕೆ ಗಳಿಗೆಯೂ
ನೆನೆಯುತ್ತ ಮರುಗುವೆ, ನಿಂತಲ್ಲೇ ಕರಗುವೆ
ಮಗುವಂತೆ ಅರಸುವೆ ನಿನ್ನ ಬೆರಳ
ಒಂದೇ ಒಂದು, ಮುತ್ತಿಡು ಸಾಕು
ಮತ್ತೇನು ಬೇಕು, ಅರೆ ಬೆಂದಾಗಿರೋ ಜೀವಕೆ
ಏನೇ ಮುದ್ದು, ಆ ನಿನ್ನ ಮಾತು
ಕೇಳುವೇನು, ಮರು ಮಾತಿಲ್ಲದೆಲೆ  
ಓ ಪ್ರೇಮ, ಇಗೋ ನಿನಗೆ ಹೃದಯದಿ ಪ್ರಣಾಮ
ಇದು ಕೊನೆಯಿರದ ಪ್ರಯಾಣ
ಜೊತೆ ಸಿಗಲು ಮನಸಿಗೆ ಉಲ್ಲಾಸ
ಇದೇ ಸವಿ ಸಮಯ ..

ಏನಾದರೂ ಇನ್ನೂ ಎಷ್ಟಾದರೂ 
ನೋವನು ಭರಿಸಬಲ್ಲೆ ನೀ ನನ್ನ ಜೊತೆಗುಳಿಯಲು
ಪ್ರಾರಂಭವಾಗಿದೆ ಈ ಪ್ರೇಮ ಶಾಖೆಯು
ಬಾ ನಮ್ಮ ದಾಖಲು ಮಾಡಿಕೊಳ್ಳುವ
ವಿಚಾರಿಸು, ಒಮ್ಮೆ ನನ್ನ ಬಳಸು
ಚಂದವಾಗಿಸು, ಕರೆ ಬಂದಾಗಿದೆ ಈಗಲೇ
ಬಿಟ್ಟು ಕೊಡು, ನಿನ್ನ ಎಲ್ಲ ಗುಟ್ಟನು
ತೊದಲುತ, ತುಟಿ ಒಂದಾಗಿಸುವೆ 
ಓ ರಾಧೆ, ನಿನ್ನ ಉಸಿರ ಹಿಂದೆ ನಾ ಬರೋದಾ?
ನಿನ್ನ ನೆರಳೊಳಗೆ ಇರೋದಾ?
ಜೊತೆ ಸಿಗಲು ಮನಸಿಗೆ ಉಲ್ಲಾಸ
ಇದೇ ಸವಿ ಸಮಯ ..


https://youtu.be/Zz-4o72VpL0

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...