Friday, 26 June 2020

ಹೀಗೆ ಕಣ್ಣಿಂದ ಕಣ್ಣಿಗೆ ಇಟ್ಟು ಗುರಿ

ಹೀಗೆ ಕಣ್ಣಿಂದ ಕಣ್ಣಿಗೆ ಇಟ್ಟು ಗುರಿ 
ಗಾಳಿ ಮುತ್ತಲ್ಲಿ ಕೊಲ್ಲೋದು ಎಷ್ಟು ಸರಿ 
ನಾವು ಸೇರೋಕೆ ಅಂತಾನೆ ಸಿಕ್ಕಾಗಿಯೂ 
ದೂರ ದೂರ ಇದ್ದೀವಲ್ಲ ಎಷ್ಟು ಸರಿ 
ಹೀಗೆಲ್ಲ ಆಗಿ ಉಳಿಯೋದು ಹೇಗೆ 
ಸಾಯೋಕೂ ಮುನ್ನ ಬದುಕನ್ನೊ ಬಾದೆ 
ಈ ಹೊತ್ತಲ್ಲೇನೇನೋ ಪೋಲಿ ನೆನಪು 
ಆಯ್ತು ಸಂಜೆಗೆಂಪು 
ಆಯ್ತು ಸಂಜೆಗೆಂಪು 
ಜೊತೆಗೆ ನಿನ್ನ ನೆನಪು 
ಆ... ಆಯ್ತು ಸಂಜೆಗೆಂಪು 

ಹೀಗೆ ಕಣ್ಣಿಂದ ಕಣ್ಣಿಗೆ ಇಟ್ಟು ಗುರಿ 
ಗಾಳಿ ಮುತ್ತಲ್ಲಿ ಕೊಲ್ಲೋದು ಎಷ್ಟು ಸರಿ 
ನಾವು ಸೇರೋಕೆ ಅಂತಾನೆ ಸಿಕ್ಕಾಗಿಯೂ 
ದೂರ ದೂರ ಇದ್ದೀವಲ್ಲ ಎಷ್ಟು ಸರಿ 

ರಾ ರ ರಾ.... 


ಮೇಲಿಂದ ಮೇಲೆ ಓದೋಕೆ ಕೊಟ್ಟೆ 
ಗುಟ್ಟಾಗಿ ಗೀಚಿಟ್ಟ ಪದ್ಯ 
ಅಲ್ಲಲ್ಲಿ ಚೂರು ತಡೆಯನ್ನು ಇಟ್ಟೆ 
ಮೌನನ ತಡೆಯೋದಸಾಧ್ಯ 
ಸಾಕು ಸುಮ್ಮನಿರು ಅಂತ ಹೇಳದಿರು 
ಎಲ್ಲ ಶುರುವಾಗೋದೆ ಹೀಗೆ ಅಂತಾರೆಲ್ರೂ 
ಒಂದೇ ಪ್ರಾಣ ಇರಬಾರದೇ?
ನಿನ್ನಲ್ಲಿ ನಾನು, ನನ್ನಲ್ಲಿ ನೀನು 
ಎದೆಯಲ್ಲಿ ಪ್ರೀತಿ, ಕಣ್ಣಲ್ಲಿ ಕಣ್ಣು 
ಎಚ್ಚುತ್ತು ನೋಡಿದ್ರೆ ಎಲ್ಲ ಡೂಪು 
ಆಗ್ಲೇ ಸಂಜೆಗೆಂಪು 
ಆಗ್ಲೇ ಸಂಜೆಗೆಂಪು 
ಜೊತೆಗೆ ನಿನ್ನ ನೆನಪು 
ಆ... ಆಗ್ಲೇ ಸಂಜೆಗೆಂಪು 


ಕುಂಟೋ ಬಿಲ್ಲೆ ಆಟ ಆಡೋಕೆ ಹೋಗಿ 
ಕಾಲೆಡವಿ ಬಂತಂತೆ ರಕ್ತ  
ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ 
ನಾನೆಷ್ಟು ಅತ್ತಿದ್ದೆ ಗೊತ್ತಾ 
ಎಂಥ ಮಳೆಯಾದರೂ ನಿಂತು ಬಿಡಬೇಕಲ್ಲ 
ಪ್ರೀತಿಗಿಂತ ಏನೂ ಒಳ್ಳೆದಾಗೆಯಿಲ್ಲ 
ಕಾಲವು ನಿಂತು ಬಿಡಬಾರದೇ?
ನೂರಾರು ಆಸೆ ಬಾಕಿ ಇರುವಾಗ 
ಹೇಳೋದ ಬಿಟ್ಟೆ ನಂಗೇನೋ ರೋಗ 
ಯಾರನ್ನೇ ನೋಡಿದ್ರೂ ನಿಂದೇ ರೂಪು 
ಆಗ್ಲೇ ಸಂಜೆಗೆಂಪು 
ಆಗ್ಲೇ ಸಂಜೆಗೆಂಪು 
ಜೊತೆಗೆ ನಿನ್ನ ನೆನಪು 
ಆ... ಆಗ್ಲೇ ಸಂಜೆಗೆಂಪು 

ರಾ ರ ರಾ.... 


https://youtu.be/pMYnJmRrxXA

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...