Tuesday 23 June 2020

ಕಡಲಿನ ಮೀನಂತೆ ಮರುಗಿದೆ ನಾ

(ಪಲ್ಲವಿ ೧)

(ಹೆಂ) ಕಡಲಿನ ಮೀನಂತೆ ಮರುಗಿದೆ ನಾ 
        ಮುಗಿಯದ ಕನಸೊಂದ ಬಯಸಿದ ನಾ 
        ಮುಗಿಲೆಡೆಗೆ ಮೊಗವಿರಿಸಿ, ಮಳೆ ಹನಿಯ ಸ್ಮರಿಸುತಲಿ
        ನಟಿಸಿ ನಗುವೆ, ಬಯಸಿ ಅಳುವೆ 
        ತೊರೆದು ನಿನ್ನನ್ನು ಗಾಯ ಗೊಳಿಸಿರುವೆ 
        ಮನ್ನಿಸು ನನ್ನ, ಮನ್ನಿಸು ನನ್ನ, ಮನ್ನಿಸು ನನ್ನ

        ನಟಿಸಿ ನಗುವೆ, ಬಯಸಿ ಅಳುವೆ 
        ತೊರೆದು ನಿನ್ನನ್ನು ಗಾಯ ಗೊಳಿಸಿರುವೆ 
        ಮನ್ನಿಸು ನನ್ನ,  ಮನ್ನಿಸು ನನ್ನ,  ಮನ್ನಿಸು ನನ್ನ,  ಮನ್ನಿಸು ನನ್ನ

(ಗಂ)  ನಿನ್ನೇ ಹುಡುಕಾಡಲೆಂದು 
         ಊರೂರಂತೆ ಅಲೆದಾಡಿ ಬಂದೆ 
         ನಿನ್ನಲ್ಲೇ ಕಳೆದು ನಾ ಹೋಗಿರುವೆ 
         ಬರೆದು ಕೊಡುವೆ ಮನಸಾರೆ 
         ಈ ಜೀವನ ನಿನಗಾಗಿ ತಾನೆ 
         ಏರು ಪೆರು ಉಸಿರಾಟದಲೂ 
         ಹಿಡಿದಿಟ್ಟೆ ನಿನ್ನ ಬಯಸಿದ ಹೃದಯದಲಿ 
         ಓ..  ಹಿಡಿದಿಟ್ಟೆ ನಿನ್ನ ಬಯಸಿದ ಹೃದಯದಲಿ 

(ಚರಣ ೧)

(ಹೆಂ)  ಈ ದಾರಿ ತುಂಬ ಹೂ ಚಿಗುರುತಿವೆ 
         ನನ್ನಂತೆ ನೀನೂ ಬೇರೂರಿರುವೆ 
         ಬಿಡುಗಡೆ ನೀಡಿ ಬಂಧಿಸಿದೆ 
         ಮನ್ನಿಸು ನನ್ನ ಒಲವೇ.. 

(ಗಂ)   ಬೀಸುವ ಗಾಳಿ ನೀನಾಗಿಯೇ 
          ಅವಳ ಬಳಿಗೆ ಹೊತ್ತು ಹೋಗು ಬಾ 
          ಗೀಚಿ ಬರೆದ ಹಾಳೆ ಕೊರಗಿದೆ 
          ಈ ಕವಿತೆಗೂ ಉಸಿರಿದೆ

 (ಹೆಂ)  ನಟಿಸಿ ನಗುವೆ, ಬಯಸಿ ಅಳುವೆ 
          ತೊರೆದು ನಿನ್ನನ್ನು ಗಾಯ ಗೊಳಿಸಿರುವೆ 
          ಮನ್ನಿಸು ನನ್ನ,  ಮನ್ನಿಸು ನನ್ನ,  ಮನ್ನಿಸು ನನ್ನ

( ಚರಣ ೨)

(ಹೆಂ)   ಏಕಾಂತದಲ್ಲೂ ನೀ ಜೊತೆಗಾರ 
          ಆರಂಭ ಮಾಡು ಓ ಕಥೆಗಾರ 
          ಮುಗಿಯುದ ಪ್ರೇಮದ ಸರಣಿಯ ನೀನು 
          ಮುಳುಗದ ಪ್ರಣಯದ ದೋಣಿಯು ನೀನು 

         ನಟಿಸಿ ನಗುವೆ, ಬಯಸಿ ಅಳುವೆ 
         ತೊರೆದು ನಿನ್ನನ್ನು ಗಾಯ ಗೊಳಿಸಿರುವೆ 
         ಮನ್ನಿಸು ನನ್ನ, ಮನ್ನಿಸು ನನ್ನ, ಮನ್ನಿಸು ನನ್ನ

(ಗಂ)  ನಿನ್ನೇ ಹುಡುಕಾಡಲೆಂದು 
         ಊರೂರಂತೆ ಅಲೆದಾಡಿ ಬಂದೆ 
         ನಿನ್ನಲ್ಲೇ ಕಳೆದು ನಾ ಹೋಗಿರುವೆ 
         ಬರೆದು ಕೊಡುವೆ ಮನಸಾರೆ 
         ಈ ಜೀವನ ನಿನಗಾಗಿ ತಾನೆ 
         ಏರು ಪೆರು ಉಸಿರಾಟದಲೂ 
         ಹಿಡಿದಿಟ್ಟೆ ನಿನ್ನ ಬಯಸಿದ ಹೃದಯದಲಿ 
         ಓ..  ಹಿಡಿದಿಟ್ಟೆ ನಿನ್ನ ಬಯಸಿದ ಹೃದಯದಲಿ.... 


https://youtu.be/7_RU5mSqX3Y

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...