Tuesday, 16 June 2020

ಸಾಕೀ...ಸಾಕೀ

ಸಾಕೀ... (೪)
ಎದೆಯ ಕದವ ನೂಕಿ
ಒಳಗೆ ಸುಳಿಯೇ ಸಾಕೀ
ಹೃದಯ ಹೃದಯ ತಾಕಿ
ಒಲವಾಗಿಸು ಬಾ ಸಾಕೀ..
ಸಾಕೀ.. (೪)

ಮನಸಿನ ಮರೆಯಲ್ಲಿ ಅರಳಿದೆ ನೀನಂದು
ಸೇರಿರುವೆ ಈಗ ಉಸಿರನ್ನೂ
ಕರೆದರೆ ನೆರವಾಗಿ ಕನಸಿಗೆ ಬರಬೇಕು
ದಾಟಿಸಲು ಕವಿದ ಇರುಳನ್ನು
ಮಿನುಗೋ ನಕ್ಷತ್ರ ಇರಿಸಿ ಕಣ್ಣಲ್ಲಿ
ಕರಗೋ ನನ್ನನ್ನು ಬಳಸು ಭರದಲ್ಲಿ
ಕಾಯುವ ಮನಸಿಲ್ಲ ಈ ಜೀವಕೆ

ಸಾಕೀ.. (೪)
ಮುಗುಳು ನಗೆಯ ಜೀಕಿ 
ಹಗುರಾಗಿಸೆಲೇ ಸಾಕಿ 
ಹೃದಯ ಹೃದಯ ತಾಕಿ
ಒಲವಾಗಿಸು ಬಾ ಸಾಕೀ..

ನುಡಿಯದೆ ಏನನ್ನೂ ವಿನಿಮಯವಾದಂತೆ
ಭಾವದ ಸಂದೇಶ ಇದು ಹೊಸತು
ದಿನಚರಿ ಮುಗಿವಂತೆ ಕಾಣದು ಇಂದೇಕೋ
ಬರೆಯಲು ಮೊದಲಾಗಿ ಈ ಕುರಿತು
ಮರಳಿ ಮನಸಾಗಿ ಬರಲಿ ತಂಗಾಳಿ
ಕಾದು ಕೂರೋಣ ಕಿಟಕಿ ಬಳಿಯಲ್ಲಿ
ಬೇಗುದಿ ಹೊಸತಲ್ಲ ಈ ಜೀವಕೆ

ಸಾಕೀ.. (೪)
ಕೊನೆಯ ಮಾತು ಬಾಕಿ 
ಕೀಳಿ ಹೋಗೇ ಸಾಕಿ 
ಹೃದಯ ಹೃದಯ ತಾಕಿ
ಒಲವಾಗಿಸು ಬಾ ಸಾಕೀ..

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...