Tuesday, 30 June 2020

ಪ್ರತಿ ಕ್ಷಣ ನಿರೂಪಿಸು ಬಾ

ಪ್ರತಿ ಕ್ಷಣ ನಿರೂಪಿಸು ಬಾ 
ಸಮೀಪಿಸಿ ಬಾ 
ಪ್ರೇಮವ ಛಾಪಿಸುವ ಕಲೆ 
ಕಲಾಧರನೆ ಇಗೋ ನಿನಗೆ 
ಒಲಿಯುವ ವೇಳೆ... 
ಪ್ರತಿ ಕ್ಷಣ ನಿರೂಪಿಸು ಬಾ 
ಸಮೀಪಿಸಿ ಬಾ 
ಪ್ರೇಮವ ಛಾಪಿಸುವ ಕಲೆ 
ಕಲಾಧರನೆ ಇಗೋ ನಿನಗೆ 
ಒಲಿಯುವ ವೇಳೆ... 
ಈ ಕಾರಿರುಳ ಗೀರುತಲಿ 
ಬೆಳಗಿಸೆಯಾ ದೀಪ 
ನೆರಳಿನಲಿ ಕಾಣುವೆನು 
ನಲುಮೆಯ ಆ ಪ್ರತಿರೂಪ.. 

ಧರಿಸುವೆ ಇರೋ ಬರೋ ನಾಚಿಕೆಯನು 
ಕಳಚೋಕೆ ನಿನ್ನ ಕರೆವೆ 
ತಡ ಮಾಡದೆಲೆ ಆಗಮಿಸು 
ಉಲಿಯುವೆ ಇನಿ ದನಿ ಹಾಡಿನೊಳಗೆ
ನೀ ಬೆರೆಸು ನಿನ್ನ ಸ್ವರವ 
ಸರಿದೂಗಿಸುತ ಹಾಡುವೆನು 
ಏಕಾಂತ ಹೊಸತಾಗಿ ಅನಿಸೋಕೆ ಶುರುವಾದಂತಿರಲು 
ಏನಂತ ಹೇಳೋದು ತುಟಿಯಂಚಲಿ ನೀ ಕೂತಿರಲು 

ಪ್ರತಿ ಕ್ಷಣ ನಿರೂಪಿಸು ಬಾ 
ಸಮೀಪಿಸಿ ಬಾ 
ಪ್ರೇಮವ ಛಾಪಿಸುವ ಕಲೆ 
ಕಲಾಧರನೆ ಇಗೋ ನಿನಗೆ 
ಒಲಿಯುವ ವೇಳೆ... 

ನಡುಗಿದೆ ಭುವಿ ನಡು ಬಳಸಿದಂತೆ 
ನನ್ನಂತೆ ತಾನು ಕೂಡ 
ಇನಿಯನ ಜೊತೆಗೆ ಇರುವ ಥರ 
ಪ್ರಣಯದ ಪರಿ ಇದು ಹೊಸ ಕಂತು 
ದಿನಕೊಂದು ಬೇರೆ ರೀತಿ 
ನನಗೂ ಸಹಿತ ಕಲಿಸುವೆಯಾ?
ಏನೆಲ್ಲ ಜರುಗಿದರೂ ಏನೂ ಆಗದಂತಿರಬೇಕು  
ಆಗಾಗಾ ಮಳೆಯೊಂದು ನಮ್ಮಂತೆ ಸೋತು ಬರಬೇಕು 

ಪ್ರತಿ ಕ್ಷಣ ನಿರೂಪಿಸು ಬಾ 
ಸಮೀಪಿಸಿ ಬಾ 
ಪ್ರೇಮವ ಛಾಪಿಸುವ ಕಲೆ 
ಕಲಾಧರನೆ ಇಗೋ ನಿನಗೆ 
ಒಲಿಯುವ ವೇಳೆ... 
ಈ ಕಾರಿರುಳ ಗೀರುತಲಿ 
ಬೆಳಗಿಸೆಯಾ ದೀಪ 
ನೆರಳಿನಲಿ ಕಾಣುವೆನು 
ನಲುಮೆಯ ಆ ಪ್ರತಿರೂಪ.. 

No comments:

Post a Comment

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ

ದೂರದಲ್ಲಿ ಯಾರೋ ನನ್ನ ಕೂಗಿದಂತಿದೆ  ಹತ್ತಿರದಲ್ಲಿ ಬಂದು ಕೂತುಕೊಂಡ ಹಾಗಿದೆ  ಯಾವ ಮಾತಿಲ್ಲದೆ, ಮೌನವೇ ಸಾಗಿದೆ  ಹೋಗಿ ಬಂದು ನಿಲ್ಲಲಿಲ್ಲ  ಎಚ್ಚರಿಸಿ ಕೇಳಲಿಲ್ಲ ನನ್ನಂತ...