ಪ್ರೀತಿಯೆಂಬುದು ಸಾಗರದಂತೆ, ಪ್ರೀತಿ ಮಳೆಯ ಬಿಂದು
ಪ್ರೀತಿಯೆಂಬುದು ಹೂ ಬಿರಿದಂತೆ, ಪ್ರೀತಿ ಸುಧೆಯ ಸಿಂಧು
ಪ್ರೀತಿಯಿಂದಲೇ ಚಿಗುರೊಡೆಯುವುದು, ಪ್ರೀತಿಯೊಂದು ಜಾದು
ಪ್ರೀತಿ ಜಗವ ಸಲಹುತಲಿಹುದು, ಪ್ರೀತಿ ದೇವರೂ ಹೌದು
ತೀರದಂಥ ಮಾಯೆಯಂತೆ, ಚಂದವಾಗಿ ಕಾಡುವಂತೆ
ಈ ಪ್ರೀತಿಯೇ ಧ್ಯಾನವು...
ನಿನ್ನ ಕಂಡು ಹಾಡೋ ಆಸೆ ಈ ಜೀವಕೆ
ನೋಡಿ ನೋಡದಂತೆ ಹೋದೆ ನೀ ಏತಕೆ? --- ೨
ಯಾರೇ ಆದರೂ ಬಾಗಲೇ ಬೇಕು, ಪ್ರೀತಿಯೆದುರು ಸೋತು
ಎಲ್ಲ ಹೇಳಲು ಆಗುವುದಿಲ್ಲ, ಮೌನ ತಾಳಲು ಮಾತು
ತಾಳ ತಪ್ಪಿತು ನನ್ನೆದೆ ಈಗ, ಗೀಚಿ ನಿನ್ನ ಕುರಿತು
ನೂರು ಜನ್ಮಗಳಾದರೂ ಬೇಡ, ನೀನು ಇರದ ಹೊರತು
ಪ್ರೀತಿ ಬಂಧಿಸುವ ಬಲೆಯಂತೆ, ಪ್ರೀತಿ ಅಲೆಯ ವಿಹಾರ
ಪ್ರೀತಿ ನಶೆಯ ಮಾದರಿಯಂತೆ, ಮುಳುಗಿದವರ ಪ್ರಾಕಾರ
ಪ್ರೀತಿ ಕನ್ನಡಿ ಬಿಂಬದ ಹಾಗೆ, ನಮ್ಮದೇ ಚಿತ್ತಾರ
ಪ್ರೀತಿಗಿಲ್ಲ ಯಾವುದೇ ಹೆಸರು, ಯಾವುದೇ ಆಕಾರ
ತೀರದಂಥ ಮಾಯೆಯಂತೆ, ಚಂದವಾಗಿ ಕಾಡುವಂತೆ
ಈ ಪ್ರೀತಿಯೇ ಧ್ಯಾನವು...
ನಿನ್ನ ಕಂಡು ಹಾಡೋ ಆಸೆ ಈ ಜೀವಕೆ
ನೋಡಿ ನೋಡದಂತೆ ಹೋದೆ ನೀ ಏತಕೆ? --- ೨
ನಿನ್ನ ಮೋಹಿಸಿ ಅದೇಕೋ ಮರುಳಾಗಿರುವೆ
ನನ್ನ ಕನಸಲ್ಲೂ ನೀ ಬಂದು ಮನೆ ಮಾಡಿರುವೆ --- ೨
ಎಲ್ಲೆ ಮೀರಿ ಬಂದೆ ನೋಡು, ನಿನ್ನ ಗುಂಗಿನಲ್ಲಿ
ತುಂಬಿಕೊಂಡೆ ನಿನ್ನೇ ಪೂರಾ, ನನ್ನ ಕಣ್ಣಿನಲ್ಲಿ
ಇಬ್ಬರದ್ದೂ ಒಂದೇ ಯಾನ, ಬಾಳ ದಾರಿಯಲ್ಲಿ
ನೀನೇ ಬೇಕು ಅನ್ನೋದೊಂದೇ ಪಟ್ಟು ಮನಸಿನಲ್ಲಿ
ಪ್ರೀತಿ ಕುರುಡು ಆದರೂ ಕೂಡ, ಬಣ್ಣ ಮಾರೋ ಸಂತೆ
ಪ್ರೀತಿಯೊಂದೇ ಉಳಿವುದು ಕೊನೆಗೆ, ಏಕೆ ಬೇರೆ ಚಿಂತೆ
ಪ್ರೀತಿ ಸಹಜ ಜೊತೆಗುಳಿಯುವುದು, ಆಡುವ ಉಸಿರಂತೆ
ಪ್ರೀತಿ ಬಿಸಿಲ ದಣಿವಾರಿಸಲು, ದೊರಯುವ ನೆರಳಂತೆ
ತೀರದಂಥ ಮಾಯೆಯಂತೆ, ಚಂದವಾಗಿ ಕಾಡುವಂತೆ
ಈ ಪ್ರೀತಿಯೇ ಧ್ಯಾನವು...
ನಿನ್ನ ಕಂಡು ಹಾಡೋ ಆಸೆ ಈ ಜೀವಕೆ
ನೋಡಿ ನೋಡದಂತೆ ಹೋದೆ ನೀ ಏತಕೆ? --- ೨
https://youtu.be/cBG2w085N04
https://youtu.be/cBG2w085N04
No comments:
Post a Comment