Tuesday, 4 February 2014

ಹಾಡೊಂದ ಗೀಚಿದೆ

ಚಂದ್ರನಲ್ಲಿ ನೀರು ಸಿಕ್ತು
ಮಂಗಳದಲಿ ಮೀನು ಹಿಡಿದೆ
ಸೌರ ಮಂಡಲ ಖಾಲಿ ಆಯ್ತು
ಭೂಮಿಯೊಂದ ಉಳಿಸಿಕೊಂಡೆ
ಆಕಾಶಕ್ಕೆ ಟೇಪು ಚಾಚಿ
ಉದ್ದ ಅಗಲ ಅಳಿದು ಬಂದೆ
ಮಾತು ಸತ್ತ ಮೂಕನಂತೆ
ನಾನು ಎಂದು ನಿನ್ನ ಮುಂದೆ
                                                (1)

ಪ್ರೀತಿಗ್ಯಾವ ಕೋರ್ಸು ಇಲ್ಲ
ಡಿಗ್ರೀ ಪಡೆಯೋದ್ ಈಸಿ
ಮೊನ್ನೆ ಸಿಕ್ಕಿ, ನೆನ್ನೆ ಲವ್ವು
ಇಂದು ಲವ್ವರ್ ಮಾಜಿ
ಪ್ರೀತಿ ಹುಟ್ಟೋವಾಗ ನಮ್ಗೆ
ಬೇರೆ ಎಲ್ಲ ಶೂನ್ಯ
ಫೊನಿನಲ್ಲಿ ಚೂರು ಪಾರು 
ರೊಕ್ಕ ಇದ್ರೆ ಪುಣ್ಯ

ಟಚ್ಚಲ್ಲಿದ್ರೆ ಬೆಜಾರಿಲ್ಲ
ಇಲ್ದೆ ಇದ್ರೆ ತೊಂದ್ರೆ
ಊಟ ಕೂಡ ಸೇರೋದಿಲ್ಲ
ಫೊನು ಎಂಗೇಜ್ ಬಂದ್ರೆ
                                               (2)

ಹುಡುಗಿ ಸ್ಮೈಲು ಕೊಟ್ಳು ಅಂದ್ರೆ
ಶಂಕ ಊದ್ಕೊಂಡಂಗೆ
ಹುಡುಗ ಹಾರ್ಟು ಕೊಟ್ಟ ಅಂದ್ರೆ
ಅಗ್ರೀಮೆಂಟ್ ಆದಂಗೆ
ಮಳೆ, ಬಿಸ್ಲು, ದಂಡು, ದಾಳಿ
ಏನೇ ಬಂದ್ರೂ ಕೂಡ
ಪ್ರೀತ್ಸೋ ವಿಷ್ಯ ಬಂತು ಅಂದ್ರೆ
ಟೈಸನ್ ಚಾಪ್ಲಿನ್ ಕೂಡ

ರಿಚ್ಚಲ್ದಿದ್ರೂ ಸೇಫು ನಾವು
ಕಟ್ಕೊಂಡೇ ಬಾಳೋರು
ಪ್ರೀತಿ ಅನ್ನೊ ಆಸ್ತಿ ನಮ್ದು
ಕದ್ದು ದೋಚೋರ್ಯಾರು ?
                                              (3)

                         -- ರತ್ನಸುತ

1 comment:

  1. ಭರತಮುನಿಗಳೇ ಹಾಡನ್ನು ಗೀಚಿದಂತಿಲ್ಲ, ನಮ್ಮೆಲ್ಲರ ಪಾಡೂ ಇಲ್ಲಿ ಹಾಡಾಗಿದೆ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...