ಪುರಾಣದ ಸೂರ್ಯ
ಭವಿಷ್ಯವ ನೋಡುತ್ತಿದ್ದಾನೆ
ವರ್ತಮಾನದ ಗೋಜಲಿನಲ್ಲಿ
ಹಿಂದೆ ಪ್ರತ್ಯಕ್ಷವಾಗುತ್ತಿದ್ದನಂತೆ
ಥೇಟು ದೇವಾನುದೇವತೆಗಳಂತೆ
ಈಗೀಗ ಹಾಗೇನನಿಸುತ್ತಿಲ್ಲ;
ಅವನ ಸಲುವು ಗುಡಿಗಳಂತೂ
ವಿರಳದಲ್ಲಿ ವಿರಳ
ತಾ ಉರಿದು ಉರಿಸುವ
ಭೂಮಂಡಲದ ತುಂಬ
ನೆರಳುಗಳ ಗುರುತು
ಭೂಮಿಗೂ ತಾತ್ಸಾರವಿದೆ ಅವನ ಕುರಿತು
ನಿಶ್ಚಲ ಅನಿಸುವಷ್ಟು ಅವನ ನಡೆ
ಕಕ್ಷೆಯನು ಹಿಡಿದು
ಸುತ್ತುವವುಗಳ ಮೇಲೆ
ಕಿಂಚಿಷ್ಟೂ ಕರುಣೆ ಇಲ್ಲದೆ
ಇದ್ದಲ್ಲೇ ಉಳಿದು ಬಿಟ್ಟ
ಸ್ವಾಭಿಮಾನಿಯಾಗಿ
ದೈತ್ಯ ಪ್ರಕಾಶಿಸಿ
ಮುಖವೊಡ್ದ ಪಡಸಾಲೆಗೆ
ಹೊನ್ನ ಲೆಪಿಸಿಹನು
ದಿನದ ಸರಸ ಮುಗಿಸಿ
ಮೆಲ್ಲ ಕಾಲ್ಕಿತ್ತನು
ತನ್ನ ಬಂಟ ಚಂದ್ರನಿರಿಸಿ
ನಿದ್ದೆಗೆ ಜಾರುವೆನೆಂದು
ಅಸಲಿಗೆ ಆತನಿಗೆ
ಹಿತ್ತಲ ಮೇಲೆ ಮೋಹ
ಹಜಾರಕೆ ತಿಳಿಯದಂತೆ
ಗುಟ್ಟಾಗಿ ಹಿತ್ತಲೊಡನೆ
ಸಲ್ಲಾಪ್ಪದ ಕ್ಷಣ ಉರುಳಿಸಿ
ಚಂದ್ರ ಕಾವಲಿಟ್ಟನು
ಮತ್ತೆ ಪಡಸಾಲೆಗೆ
ಲಗ್ಗೆ ಹಾಕಿ
ಅಗೋ ಮತ್ತೆ ತೂಕಡಿಸಿ
ಮುಖ ಊದಿಸಿ
ಕೆಂಪಾಗಿಸಿ
ಮಲಗೆ ಹೊರಟ ತುಂಟ;
ಎಲ್ಲಿ ಮರೆಯಾದ
ತನ್ನ ಬಲಗೈ ಬಂಟ?!!
ಇಂದೇಕೋ ಭೂಮಿ
ತನ್ನಿಡಿ ನೆರಳ
ಚಂದ್ರನಿಗೆ ಹೊದ್ದಿಸಿಹಳು
ಹಜಾರಕ್ಕೆ ಇನ್ನು ಕಗ್ಗತ್ತಲು
ಹಿತ್ತಲಿಗೆ ಬೆಳಕೋ ಬೆಳಕು....
-- ರತ್ನಸುತ
ಭವಿಷ್ಯವ ನೋಡುತ್ತಿದ್ದಾನೆ
ವರ್ತಮಾನದ ಗೋಜಲಿನಲ್ಲಿ
ಹಿಂದೆ ಪ್ರತ್ಯಕ್ಷವಾಗುತ್ತಿದ್ದನಂತೆ
ಥೇಟು ದೇವಾನುದೇವತೆಗಳಂತೆ
ಈಗೀಗ ಹಾಗೇನನಿಸುತ್ತಿಲ್ಲ;
ಅವನ ಸಲುವು ಗುಡಿಗಳಂತೂ
ವಿರಳದಲ್ಲಿ ವಿರಳ
ತಾ ಉರಿದು ಉರಿಸುವ
ಭೂಮಂಡಲದ ತುಂಬ
ನೆರಳುಗಳ ಗುರುತು
ಭೂಮಿಗೂ ತಾತ್ಸಾರವಿದೆ ಅವನ ಕುರಿತು
ನಿಶ್ಚಲ ಅನಿಸುವಷ್ಟು ಅವನ ನಡೆ
ಕಕ್ಷೆಯನು ಹಿಡಿದು
ಸುತ್ತುವವುಗಳ ಮೇಲೆ
ಕಿಂಚಿಷ್ಟೂ ಕರುಣೆ ಇಲ್ಲದೆ
ಇದ್ದಲ್ಲೇ ಉಳಿದು ಬಿಟ್ಟ
ಸ್ವಾಭಿಮಾನಿಯಾಗಿ
ದೈತ್ಯ ಪ್ರಕಾಶಿಸಿ
ಮುಖವೊಡ್ದ ಪಡಸಾಲೆಗೆ
ಹೊನ್ನ ಲೆಪಿಸಿಹನು
ದಿನದ ಸರಸ ಮುಗಿಸಿ
ಮೆಲ್ಲ ಕಾಲ್ಕಿತ್ತನು
ತನ್ನ ಬಂಟ ಚಂದ್ರನಿರಿಸಿ
ನಿದ್ದೆಗೆ ಜಾರುವೆನೆಂದು
ಅಸಲಿಗೆ ಆತನಿಗೆ
ಹಿತ್ತಲ ಮೇಲೆ ಮೋಹ
ಹಜಾರಕೆ ತಿಳಿಯದಂತೆ
ಗುಟ್ಟಾಗಿ ಹಿತ್ತಲೊಡನೆ
ಸಲ್ಲಾಪ್ಪದ ಕ್ಷಣ ಉರುಳಿಸಿ
ಚಂದ್ರ ಕಾವಲಿಟ್ಟನು
ಮತ್ತೆ ಪಡಸಾಲೆಗೆ
ಲಗ್ಗೆ ಹಾಕಿ
ಅಗೋ ಮತ್ತೆ ತೂಕಡಿಸಿ
ಮುಖ ಊದಿಸಿ
ಕೆಂಪಾಗಿಸಿ
ಮಲಗೆ ಹೊರಟ ತುಂಟ;
ಎಲ್ಲಿ ಮರೆಯಾದ
ತನ್ನ ಬಲಗೈ ಬಂಟ?!!
ಇಂದೇಕೋ ಭೂಮಿ
ತನ್ನಿಡಿ ನೆರಳ
ಚಂದ್ರನಿಗೆ ಹೊದ್ದಿಸಿಹಳು
ಹಜಾರಕ್ಕೆ ಇನ್ನು ಕಗ್ಗತ್ತಲು
ಹಿತ್ತಲಿಗೆ ಬೆಳಕೋ ಬೆಳಕು....
-- ರತ್ನಸುತ
No comments:
Post a Comment