ಗದ್ದಲದ ಕಾಡಲಿ
ಸದ್ದು ಮಾಡದೆ ಗುಬ್ಬಿ
ಪುಟ್ಟ ಗೂಡಲಿ ತನ್ನ
ತಾಯ ತಬ್ಬಿತ್ತು
ಹೊರಗೆ ಗುಡುಗು-ಸಿಡಿಲು
ಆಲಿಕಲ್ಲ ಮಳೆ
ಅಮ್ಮ ಗುಟುಕ ತರಲು
ಹೊರಟು ನಿಂತಿತ್ತು
ನಿದ್ದೆ ಕಣ್ಣನು ಉಜ್ಜಿ
ಮೈ ಮುರಿಯುತ ತಾನು
"ಎಲ್ಲಿ ಹೋದೆ ಅಮ್ಮ?"
ಅಂತು ಮರಿ ಗುಬ್ಬಿ
"ಚಂದಾ ಮಾಮನು ಇಂದು
ಮನೆಗೆ ಬರುವನು ಕಂದ;
ತಿಂಡಿ ತರಬೇಕಲ್ಲ?"
ಅಂತು ತಾಯ್ಗುಬ್ಬಿ
"ನನಗಾರೆ ಕಾವಲು
ಹದ್ದು ಗುಮ್ಮ ಬಂದು
ಹೊತ್ತು ಹೊರಟರೆ ನನ್ನ
ಆರ ಕೂಗಲಿ ಅಮ್ಮ?!!
ಹಾರಲೇ, ಉಳಿಯಲೇ
ಇಲ್ಲ ಸೆರೆಯಾಗಲೇ?
ಎಳೆಸು ಉಗುರು ಪರಚೆ
ಹೆದರುವನೇ ಗುಮ್ಮ?"
"ಕಂದಮ್ಮ ಅಳದಿರು
ನಾ ಗದರಿ ಹೋಗುವೆ
ನನ್ನ ಕಂಡರೆ ಗುಮ್ಮ
ಹೆದರಿ ಸಾಯುವನು!!
ನನ್ನ ಹೊರತು ನಿನ್ನ
ಯಾರೇ ಕೂಗಿದರೂ
ಬಿಟ್ಟು ಬರದಿರು ನೀನು
ನಮ್ಮ ಗೂಡನ್ನು"
ಒಂದು ಪುಕ್ಕವ ಕಿತ್ತು
ಹೊದಿಸಿತು ಮೈ ಮೇಲೆ
"ಹೋಗಿ ಬರುವೆ ಕಂದ
ಗುಟುಕಿನೊಂದಿಗೆ ಎಂದು"
ಹಾರಿ ಹೋಯಿತು ಅಮ್ಮ
ದಿನ ಕಳೆದರೂ ಬರದೆ,
ಮರಿ ಗುಬ್ಬಿ ಗೂಡನ್ನು
ಬಿಟ್ಟು ಬರಲಿಲ್ಲ
ಇರುಳಲ್ಲಿ ಬಂದನವ
ಚಂದಾ ಮಾಮನ ಕಂಡು
ಕೇಳಿತು ಮರಿ ಗುಬ್ಬಿ
"ಕಂಡೆಯಾ ಅಮ್ಮನ?"
ಚಂದಿರನು ನಗುತಿದ್ದ,
ತೇಲಿ ಬಂದ ಮುಗಿಲ
ಮರೆಯಲ್ಲಿ ಆಗಾಗ
ಒರೆಸುತ ಕಣ್ಣ
ಹೇಳದ ಕಥೆಯನ್ನೇ
ಮತ್ತೆ ಮತ್ತೆ ಕೇಳಿ
ಗೂಡಲ್ಲೇ ಅಸುನೀಗಿತು
ಒಂದು ಹಾಡು
ಬುಡ ಸಹಿತ ಉರುಳಿತು
ಗೂಡು ಹೊತ್ತ ಮರ
ನಿಮಿಷ ಮೌನವ ವಹಿಸಿತು
ದಟ್ಟ ಕಾಡು !!
-- ರತ್ನಸುತ
ಸದ್ದು ಮಾಡದೆ ಗುಬ್ಬಿ
ಪುಟ್ಟ ಗೂಡಲಿ ತನ್ನ
ತಾಯ ತಬ್ಬಿತ್ತು
ಹೊರಗೆ ಗುಡುಗು-ಸಿಡಿಲು
ಆಲಿಕಲ್ಲ ಮಳೆ
ಅಮ್ಮ ಗುಟುಕ ತರಲು
ಹೊರಟು ನಿಂತಿತ್ತು
ನಿದ್ದೆ ಕಣ್ಣನು ಉಜ್ಜಿ
ಮೈ ಮುರಿಯುತ ತಾನು
"ಎಲ್ಲಿ ಹೋದೆ ಅಮ್ಮ?"
ಅಂತು ಮರಿ ಗುಬ್ಬಿ
"ಚಂದಾ ಮಾಮನು ಇಂದು
ಮನೆಗೆ ಬರುವನು ಕಂದ;
ತಿಂಡಿ ತರಬೇಕಲ್ಲ?"
ಅಂತು ತಾಯ್ಗುಬ್ಬಿ
"ನನಗಾರೆ ಕಾವಲು
ಹದ್ದು ಗುಮ್ಮ ಬಂದು
ಹೊತ್ತು ಹೊರಟರೆ ನನ್ನ
ಆರ ಕೂಗಲಿ ಅಮ್ಮ?!!
ಹಾರಲೇ, ಉಳಿಯಲೇ
ಇಲ್ಲ ಸೆರೆಯಾಗಲೇ?
ಎಳೆಸು ಉಗುರು ಪರಚೆ
ಹೆದರುವನೇ ಗುಮ್ಮ?"
"ಕಂದಮ್ಮ ಅಳದಿರು
ನಾ ಗದರಿ ಹೋಗುವೆ
ನನ್ನ ಕಂಡರೆ ಗುಮ್ಮ
ಹೆದರಿ ಸಾಯುವನು!!
ನನ್ನ ಹೊರತು ನಿನ್ನ
ಯಾರೇ ಕೂಗಿದರೂ
ಬಿಟ್ಟು ಬರದಿರು ನೀನು
ನಮ್ಮ ಗೂಡನ್ನು"
ಒಂದು ಪುಕ್ಕವ ಕಿತ್ತು
ಹೊದಿಸಿತು ಮೈ ಮೇಲೆ
"ಹೋಗಿ ಬರುವೆ ಕಂದ
ಗುಟುಕಿನೊಂದಿಗೆ ಎಂದು"
ಹಾರಿ ಹೋಯಿತು ಅಮ್ಮ
ದಿನ ಕಳೆದರೂ ಬರದೆ,
ಮರಿ ಗುಬ್ಬಿ ಗೂಡನ್ನು
ಬಿಟ್ಟು ಬರಲಿಲ್ಲ
ಇರುಳಲ್ಲಿ ಬಂದನವ
ಚಂದಾ ಮಾಮನ ಕಂಡು
ಕೇಳಿತು ಮರಿ ಗುಬ್ಬಿ
"ಕಂಡೆಯಾ ಅಮ್ಮನ?"
ಚಂದಿರನು ನಗುತಿದ್ದ,
ತೇಲಿ ಬಂದ ಮುಗಿಲ
ಮರೆಯಲ್ಲಿ ಆಗಾಗ
ಒರೆಸುತ ಕಣ್ಣ
ಹೇಳದ ಕಥೆಯನ್ನೇ
ಮತ್ತೆ ಮತ್ತೆ ಕೇಳಿ
ಗೂಡಲ್ಲೇ ಅಸುನೀಗಿತು
ಒಂದು ಹಾಡು
ಬುಡ ಸಹಿತ ಉರುಳಿತು
ಗೂಡು ಹೊತ್ತ ಮರ
ನಿಮಿಷ ಮೌನವ ವಹಿಸಿತು
ದಟ್ಟ ಕಾಡು !!
-- ರತ್ನಸುತ
ಒಳ್ಳೆಯ ಶಿಶು ಸಾಹಿತ್ಯ.
ReplyDeleteಪುಕ್ಕ ಕಿತ್ತು ಹೊದೆಸಿ ಹೋದ ಅಮ್ಮನ ಬರುವಿಕೆಗೆ ಕಾದ ಮರಿ ಗುಬ್ಬಿಯ ಅಳಲು ಮನ ಕಲುಕಿತು.
ಓದುವುದಕ್ಕೆ ಶಿಶು ಸಾಹಿತ್ಯವಾದರೂ ದೊಡ್ಡವರಿಗೂ ಹೃದಯದಲ್ಲಿ ಕಂಪನ ಮೂಡಿಸುವ ಸಾಹಿತ್ಯವುಳ್ಳ ಒಂದು ಸುಂದರ ರಚನೆ. ಅಮ್ಮನಿಗಾಗಿ ಕಾಯ್ದು ಅಸು ನೀಗುವ ಎಳೆ ಕಂದಮ್ಮನ ಪರಿತಪಿಸುವ ಚಿತ್ರಣ ನಿಜವಾಗಿಯೂ ಅದ್ಭುತ.
ReplyDelete