Friday, 7 February 2014

ನಮ್ಮ ಮಂದಿ

"ಮಂದಿ ಸೇರುತ್ತಾರೆ ಒಟ್ಟೊಟ್ಟಿಗೆ 
ಹಂದಿಗಳಂತಲ್ಲ"
ಅದ್ಯಾಕೆ ಹಾಗಲ್ಲ?!! 
ಹಂದಿಗಳಂತೆಯೇ ಅಂದುಕೊಳ್ಳೋಣ 
ತಪ್ಪೇನು?!!
ವಿಚಾರ ಬೇರೆಯೇ ಇರಬಹುದು 
ಆಚಾರ ಮುಖ್ಯ;
ರೊಚ್ಚಿನೊಳಗೊಗ್ಗಟ್ಟು, ಸ್ಫೂರ್ತಿ ಅಲ್ಲಿ?!!
 
"ಮಂದಿ ಬೊಗಳುತ್ತಾರೆ 
ನಾಯಿಗಳಂತೆ"
ಆದರೇನಂತೆ?!!
ಅದೂ ಅನುಕರಣೆಯೇ ತಾನೆ?
ಬೊಗಳುವುದರರ್ಥ 
ಆಕ್ರೋಶ, ಸ್ವಾಭಿಮಾನ 
ನಾಯಿಗಳ ಆತ್ಮಗೌರವದ ವಿಷಯ;
ಅದೇನು ಗತ್ತು, ಕಟ್ಟಿಹಾಕಿದ್ದರೂ?!!
 
"ಮಂದಿ ವರ್ತಿಸುತ್ತಾರೆ 
ಗೂಬೆಗಳಂತೆ"
ಒಳ್ಳೆಯ ಬೆಳವಣಿಗೆಯೇ!!
ಜಾಗತೀಕರಣದ ಬರಾಟೆಯಲ್ಲಿ 
ಹಗಲಲ್ಲಷ್ಟೇ ದುಡಿದು 
ಈ.ಎಮ್.ಐ ಹುರಿಗೆ ಸಿಕ್ಕಿ ಸಾಯಬೇಕೆ?!!
ಸಮತೋಲನದ ತಕ್ಕಡಿ ತೂಗಲು 
ಗೂಬೆಯ ಗುಣ ವರದಾನವೇ ಸರಿ!!
 
"ಮಂದಿ ಬಣ್ಣ ಬದಲಿಸುವರು 
ಊಸರವಳ್ಳಿಯಂತೆ"
ಸ್ವಾಗತಾರ್ಹ ನಡೆ!!
ಗೋಡೆಯ ಮಾಸಲು ಬಣ್ಣಕೆ  
ಮನಸೋಲುವ ಕಣ್ಣುಗಳೆಲ್ಲಿ?!!
ಋತು, ಸ್ವರ, ಬಟ್ಟೆ, ಪರಿಸರ 
ಬದಲಾದಾಗಲಷ್ಟೇ ಪ್ರಾಮುಖ್ಯತೆ 
ಇಲ್ಲವೇ
ಕೆತ್ತಿ ಬಿಟ್ಟ ಶಿಲೆಗಳಾಗಿ ಉಳಿವುದೊಲಿತು !!
 
"ಮಂದಿಯ ಆಲೋಚನೆಗಳು 
ನರಿಯಂತೆ"
ನರ, ನರಿಯ ನಡಿವೆ  
"ಇ"ಕಾರ ಅಂತರಕೆ 
ತೆರೆ ಬೀಳಿಸುವ ಕಾರ್ಯ 
ಮೆಚ್ಚುಗೆಗೆ ಪಾತ್ರವಾದುದು 
ದಿನ ಮೊದಲು ದರ್ಶನಕೆ ನರಿಯ ಪಟವೇಕೆ?!!
ನರರಿಗಿಂತಲೂ ಬೇರೆ ಅದೃಷ್ಟ ಬೇಕೆ?!!
 
ಮುಂದುವರಿಸಬೇಕಿದೆ........ 

                                        -- ರತ್ನಸುತ

No comments:

Post a Comment

ಹೃದಯವ ನೀಡಲೇ

ಹೃದಯವ ನೀಡಲೇ ಹೇಳದ ಮಾತಿವೆ ನೂರಾರು ಆಲಿಸು ಈಗಲೇ ಪಾಲಿಸಿ ನಿನ್ನಯ ನೆರಳನು ಹೃದಯವ ನೀಡಲೇ ಹೊಂಗನಸ ಅಂಗಳದಿ ಅರಳಿರುವ ಚಂದಿರ ನೀ  ಯಾರಿರದ ತೀರದಲಿ ಅಲೆಗಳಲೂ ನಿನ್ನ ದನಿ  ...