ಮೂರು ದಾರಿಯ ತೋರಿ
ಒಂದೇ ಗುರಿಯಿಟ್ಟನು
ಒಗಟಿಗೆ ಉತ್ತರ?
ಮತ್ತೊಂದು ಒಗಟನಿಟ್ಟನು
ದಾರಿ ಒಂದು, ನೇರ
ಗುರಿಯತ್ತ ಪಯಣ
ಒಂಟಿ ಅಲ್ಲಿ
ಕಾಲೆಳೆವವರಿಲ್ಲ,
ಬೆಂಬಲದವರಿಲ್ಲ
ಹೇಗೇ ಸಾಗಿದರೂ
ಗುರಿಯಂತೂ ಖಚಿತ
ನಾನಾದೆ ಚಕಿತ
ದಾರಿ ಎರಡು, ಬಳಸು
ಆದರೂ ಸಲೀಸು
ಜೊತೆಗೊಂದು ನೆರಳು
ಹೆಜ್ಜೆ ಗುರುತ ಹುರುಳು
ನಾ ಮೊದಲಿಗನಲ್ಲ
ಆಗಿದ್ದರೂ ಭಯವಿಲ್ಲ
ದಿಕ್ಕ್ಸೂಚಿ ಫಲಕ
ಸವಲತ್ತು, ಕೊನೆ ತನಕ
ದಾರಿ ಮೂರು, ನೂರು
ಒಡೆದ ಕವಲ ಬೇರು
ನಿಂತಲ್ಲೇ ಆದಿ
ಇಟ್ಟೆಡೆಗೇ ಹೆಜ್ಜೆ
ಎಡ ಪಂಕ್ತಿಯ ಪೊಗರು
ಬಲ ಪಂಕ್ತಿಯ ಸವರು
ನಡು ದಾರಿಗೆ ನಡುಕ
ಗುರಿ ಗೌಪ್ಯ ಗಮಕ
<< ನನ್ನೊಳಗೇ ಅವಲೋಕನ >>
ಒಂದೋ ಮುಗಿವುದು ಬೇಗ
ಎರಡೋ ಒಲಿದರೆ ಭೋಗ
ಮೂರು ಬಯಸುವರ್ಯಾರು?!!
"ಮೂರು?
ಬೆಳಕಿಲ್ಲದ ಊರು
ಇಟ್ಟಿರದ ಹೆಸರು
ಕಣ ಮಾತ್ರದ ಚಿಗುರು" <<ನಾ ಬೇಡದ ಆಯ್ಕೆ>>
ಬೆಳಕ ಉಂಡು
ಹೆಸರಿರಿಸಿಕೊಂಡು
ಬಲಿತ ಚಿಗುರು
ಬಳಿಕ "ಗದರು"
ನಿಂತೆ!!
ಅದೇ ಮೊದಲು
ಹೆಜ್ಜೆ ತೊದಲು
ತಾಜಾ ದಿಗಿಲು
ಮುಂದೆ?
ಈಗಲೂ ಪ್ರಶ್ನೆ
ಅದೊಂದೇ !!
-- ರತ್ನಸುತ
ಒಂದೇ ಗುರಿಯಿಟ್ಟನು
ಒಗಟಿಗೆ ಉತ್ತರ?
ಮತ್ತೊಂದು ಒಗಟನಿಟ್ಟನು
ದಾರಿ ಒಂದು, ನೇರ
ಗುರಿಯತ್ತ ಪಯಣ
ಒಂಟಿ ಅಲ್ಲಿ
ಕಾಲೆಳೆವವರಿಲ್ಲ,
ಬೆಂಬಲದವರಿಲ್ಲ
ಹೇಗೇ ಸಾಗಿದರೂ
ಗುರಿಯಂತೂ ಖಚಿತ
ನಾನಾದೆ ಚಕಿತ
ದಾರಿ ಎರಡು, ಬಳಸು
ಆದರೂ ಸಲೀಸು
ಜೊತೆಗೊಂದು ನೆರಳು
ಹೆಜ್ಜೆ ಗುರುತ ಹುರುಳು
ನಾ ಮೊದಲಿಗನಲ್ಲ
ಆಗಿದ್ದರೂ ಭಯವಿಲ್ಲ
ದಿಕ್ಕ್ಸೂಚಿ ಫಲಕ
ಸವಲತ್ತು, ಕೊನೆ ತನಕ
ದಾರಿ ಮೂರು, ನೂರು
ಒಡೆದ ಕವಲ ಬೇರು
ನಿಂತಲ್ಲೇ ಆದಿ
ಇಟ್ಟೆಡೆಗೇ ಹೆಜ್ಜೆ
ಎಡ ಪಂಕ್ತಿಯ ಪೊಗರು
ಬಲ ಪಂಕ್ತಿಯ ಸವರು
ನಡು ದಾರಿಗೆ ನಡುಕ
ಗುರಿ ಗೌಪ್ಯ ಗಮಕ
<< ನನ್ನೊಳಗೇ ಅವಲೋಕನ >>
ಒಂದೋ ಮುಗಿವುದು ಬೇಗ
ಎರಡೋ ಒಲಿದರೆ ಭೋಗ
ಮೂರು ಬಯಸುವರ್ಯಾರು?!!
"ಮೂರು?
ಬೆಳಕಿಲ್ಲದ ಊರು
ಇಟ್ಟಿರದ ಹೆಸರು
ಕಣ ಮಾತ್ರದ ಚಿಗುರು" <<ನಾ ಬೇಡದ ಆಯ್ಕೆ>>
ಬೆಳಕ ಉಂಡು
ಹೆಸರಿರಿಸಿಕೊಂಡು
ಬಲಿತ ಚಿಗುರು
ಬಳಿಕ "ಗದರು"
ನಿಂತೆ!!
ಅದೇ ಮೊದಲು
ಹೆಜ್ಜೆ ತೊದಲು
ತಾಜಾ ದಿಗಿಲು
ಮುಂದೆ?
ಈಗಲೂ ಪ್ರಶ್ನೆ
ಅದೊಂದೇ !!
-- ರತ್ನಸುತ
No comments:
Post a Comment